ಚಿಯರ್ಸ್ ಲೀಡರ್ ಗಳ ಸಂಬಳ ಎಷ್ಟು ಗೊತ್ತಾ.?? ಯಾವ IPL ಟೀಮ್ ಅತಿ ಹೆಚ್ಚು ಸಂಬಳ ನೀಡುತ್ತೆ.??

Date:

ಚಿಯರ್ಸ್ ಲೀಡರ್ ಗಳ ಸಂಬಳ ಎಷ್ಟು ಗೊತ್ತಾ.?? ಯಾವ IPL ಟೀಮ್ ಅತಿ ಹೆಚ್ಚು ಸಂಬಳ ನೀಡುತ್ತೆ.??

ಕ್ರಿಕೆಟ್ ಗೆ ಭಾರತದಲ್ಲಿ ಯಾವ ಕ್ರೀಡೆಗೂ ಸಿಗದ ಖ್ಯಾತಿ ಇದೆ .. ಅದು ಯಾವ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡಿದೆ ಅಂದ್ರೆ ಕ್ರಿಕೆಟ್ ಪಂದ್ಯಗಳ ಟಿಕೆಟ್ ಗೆ ಅನ್ನನೀರು ಬಿಟ್ಟು ಸರದಿ ಸಾಲಿನಲ್ಲಿ ನಿಂತು ದಿನಗಟ್ಟಲೆ ಕಾಯ್ದು ಟಿಕೆಟ್ ಪಡೆಯುತ್ತಾರೆ..ವಿಶೇಷವಾಗಿ  ಐಪಿಎಲ್ ಪಂದ್ಯಗಳ ಟಿಕೆಟ್ ಗೆ ಭಾರಿ ಬೇಡಿಕೆ ಇದೆ.. ಮೂರು ತಾಸು ನಡಿಯೋ T20 ಪಂದ್ಯಗಳನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳ ದಂಡೆ ಕ್ರೀಡಾಂಗಣವನ್ನ ಆವರಿಸಿರುತ್ತೆ ..

ಐಪಿಎಲ್ ಟೂರ್ನಿಗಳಲ್ಲಿ ಕ್ರಿಕೆಟ್ ಗೆ ಎಷ್ಟು ಮಹತ್ವ ಇರುತ್ತೋ  ಅಷ್ಟೆ ಮಹತ್ವ  ಮನೋರಂಜನೆಗು ಇರುತ್ತೆ ಇದರ ಮುಖ್ಯವಾದ ಭಾಗವೇ ಚಿಯರ್ ಲೀಡರ್ಸ್ .. ಆಟಗಾರರು ಸಿಕ್ಸು ಫೋರು ಹೊಡೆದಾಗ ತಮ್ಮ ವಿಶಿಷ್ಟ ಶೈಲಿಯ ನೃತ್ಯದ ಮೂಲಕ ಸ್ಡೇಡಿಯಂ ನಲ್ಲಿ ನೆರೆದಿರುವ ಅಭಿಮಾನಿಗಳನ್ನ ರಂಜಿಸುತ್ತಾರೆ..

ಇಷ್ಟೆಲ್ಲ ರಂಜಿಸೋ ಚಿಯರ್ ಲೀಡರ್ಸ್ ಗಳ ಸಂಬಳ ಎಷ್ಟಿರ್ಬಹುದು ಅನ್ನೋ  ಕುತೂಹಲ ಮೂಡೋದು ಸಹಜ.. ಹೌದು ಚಿಯರ್ಸ್ ಲೀಡರ್ ಗಳ ಸಂಬಳವನ್ನ ನಾವೀಗ ರಿವೀಲ್ ಮಾಡ್ತೀವಿ ನೋಡಿ.. ಸದ್ಯ ಚಿಯರ್ ಲೀಡರ್ ಗಳು ಪ್ರತಿ ಐಪಿಎಲ್ ಪಂದ್ಯಗಳಿಗೆ ಕನಿಷ್ಟ 6 ಸಾವಿರದಿಂದ 12 ಸಾವಿರದ ವರೆಗು ಸಂಬಳ ಪಡೆಯುತ್ತಾರೆ ಇದರ ಜೊತೆಗೆ ಬೆಂಬಲಿಸೋ ತಂಡ ಪಂದ್ಯ ಗೆದ್ದರೆ ಬೊನಸ್ ಕೂಡ ಸಿಗುತ್ತೆ ..

ಇದರ ಜೊತೆಗೆ ತಂಡ ನೆಡೆಸೋ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅದಕ್ಕೂ ಹಣ ಪಡೆಯುತ್ತಾರೆ ..ಚಿಯರ್ಸ್ ಲೀಡರ್ ಪಡಿಯೋ ಸಂಬಳ ತಂಡದ ಫ್ರ್ಯಾಂಚಾಯಿಸಿ ಮೇಲೆ ಅವಲಂಬಿತವಾಗಿರುತ್ತೆ ..ಫ್ರ್ಯಾಂಚಾಯಿಸಿಗಳು ತಮ್ಮ ಬಜೆಟ್ಗೆ ಅನುಸಾರವಾಗಿ ಸಂಬಳ ನಿಗದಿ ಮಾಡುತ್ತಾರೆ..

ಈ ಸುದ್ದಿ ಓದಿದ ಮೇಲೆ ನಿಮ್ಮ ತಲೇಲಿ ಈ ಪ್ರಶ್ನೆ ಓಡ್ತಾ ಇರುತ್ತೆ.. ಯಾವ ಫ್ರ್ಯಾಂಚಾಯಿಸಿ ಹೆಚ್ಚು ಸಂಬಳ ನೀಡುತ್ತೆ ಅಂತ .. ಹೌದು ಅದುವೇ ಕಿಂಗ್ ಖಾನ್ ಶಾರುಖ್ ಓಡೆತನದ ಕೊಲ್ಕತ್ತ ನೈಟ್ ರೈಡರ್ಸ್.. ಈ ಫ್ರ್ಯಾಂಚಾಯಿಸಿ ಪ್ರತಿ ಪಂದ್ಯಗಳಿಗೆ ಸುಮಾರು 19 ಸಾವಿರದಿಂದ 20 ಸಾವಿರದವರೆಗೂ ಸಂಬಳ ನೀಡುತ್ತಂತೆ.. ಜೊತೆಗೆ ಪಂದ್ಯ ಗೆದ್ರೆ 6 ಸಾವಿರ ಬೋನಸ್ ಸಿಗತ್ತಂತೆ .. ಏನೇ ಹೇಳಿ ಸಿನಿಮಾದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ನಲ್ಲೂ ಕೂಡ ಶಾರುಖ್ ಕಿಂಗ್ ಖಾನ್ ನಾನೆ ಅಂತ ಫ್ರೂವ್ ಮಾಡಿದ್ದಾರೆ..

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...