ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಇವರೆಲ್ಲ ಕಣಕ್ಕೆ ಇಳಿಯುವುದು ಡೌಟ್..!!??
ಇಂದು ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಿದೆ.. ಇದು ಮುಂಬರಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೆ ಬಿಂಬಿಸಲಾಗುತ್ತಿದೆ.. ಮುಂದಿನ ಮಹಾ ಚುನಾವಣೆಗೆ ನಾಂದಿ ಎಂಬಂತಿದೆ.. ಬಿಜೆಪಿಗೆ ಈ ಚುನಾವಣೆಯಲ್ಲಿ ತೀರ್ವ ಮುಖಭಂಗವಾಗಿದ್ದು, ಲೋಕಸಭೆ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ನೋಡುವುದಾದರು, ಬಲಿಷ್ಠ ಅಭ್ಯರ್ಥಿಗಳೆ ಮುಂದಿನ ಚುನಾವಣೆಯಲ್ಲಿ ಕಣಕ್ಕೆ ಇಳಿತಾರ ಎಂಬ ಅನುಮಾನವಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಸದ್ಯ ಅಧಿಕಾರದಲ್ಲಿರುವ ಯೋಗಿ ಆದಿತ್ಯನಾಥ್, ಮೌರ್ಯ ಸ್ಪರ್ಧೆ ಇಲ್ಲ.. ಅಮಿತ್ ಶಾ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವುದರಿಂದ ಅವರ ಸ್ಪರ್ಧೆಯು ಡೌಟ್.. ಇನ್ನುಳಿದಂತೆ ಅಡ್ವಾಣಿ ಅವರು ಸೇರಿದಂತೆ ಜೋಶಿ, ಕಲರಾಜ್ ಅವರು ವಯಸ್ಸಿನ ಕಾರಣದಿಂದ ಮುಂಬರಲಿರುವ ಚುನಾವಣೆಯಿಂದ ದೂರ ಉಳಿದರೆ ಅಚ್ಚರಿ ಇಲ್ಲ..
ಇನ್ನು ಕೆಲವು ಪ್ರಭಾವಿ ರಾಜಕಾರಣಿಗಳು ರಾಜ್ಯಸಭೆಯಲ್ಲಿದ್ದಾರೆ ಹೀಗಾಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ದೊಡ್ಡ ದೊಡ್ಡ ರಾಜಕೀಯ ಚತುರರೆ ದೂರ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..