ಟ್ರಿನಿಟಿ ಸರ್ಕಲ್ ಮೆಟ್ರೊ ಸೇತುವೆಯಲ್ಲಿ ಬಿರುಕು..!! ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ
ಮೆಟ್ರೊ ಬಂದ ಮೇಲೆ ಬೆಂಗಳೂರಿನ ಹಲವು ಭಾಗಗಲ್ಲಿ ಪ್ರಯಟಣಿಕರಿಗೆ ಅನುಕೂಲವಾಗಿದೆ.. ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ನಿಲ್ಲಿತ್ತಿದ್ದವರು ಈಗ ಮೆಟ್ರೊ ಮೂಲಕ ಆರಾಮವಾಗಿ ಪ್ರಯಾಣಿಸುತ್ತಿದ್ದಾರೆ.. ಹೀಗಿರುವ ಪ್ರಯಾಣಕರಿಗೆ ಈಗ ಮತ್ತೆ ಮೆಟ್ರೊ ಹತ್ತೋದಾ ಬೇಡ್ವಾ ಅನ್ನೋ ಆತಂಕ ಶುರುವಾಗಿದೆ.. ಇದಕ್ಕೆ ಕಾರಣ ಟ್ರನಿಟಿ ಸರ್ಕಲ್ ಬಳಿಯ ಮೊಟ್ರೊ ಪಿಲ್ಲರ್.
ಈ ಸ್ಟೇಷನ್‍ನ 155ನೇ ಪಿಲ್ಲರ್ ಮೇಲೆ ರೈಲ್ವೆ ಟ್ರ್ಯಾಕ್‍ನ ಬೀಮ್ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟಿರುವುದು ಗೊತ್ತಾದ ಕೂಡಲೇ ಬಿಎಂಆರ್‍ಸಿಎಲ್ ಸಿಬ್ಬಂದಿ ಬೀಮ್‍ಗೆ ಜಾಕ್ ಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 15 ನಿಮಿಷಕ್ಕೆ ಒಂದರಂತೆ ರೈಲುಗಳನ್ನು ಬಿಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಬಾರಿ ತೊಂದರೆಯಾಗಿದ್ದು, ಮೆಟ್ರೊಗಾಗಿ ನೂಕುನುಗ್ಗಲು ಉಂಟಾಗಿದೆ.. ಮೆಟ್ರೋ ಬೀಮ್‍ನಲ್ಲಿ ಜಾಕ್ ಅಳವಡಿಸುವ ಕಾರ್ಯ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.. ಆದಷ್ಟು ಬೇಗ ಸಮಸ್ಯೆಯನ್ನ ಬಗೆ ಹರಿಸಲಾಗುವುದು ಅಂತ ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ..