400 ವರ್ಷಗಳ ಇತಿಹಾಸ ಪ್ರಸಿದ್ಧ ಬ್ರಹ್ಮರಥಕ್ಕೆ ಕೊನೆಯ ಚಂಪಾಷಷ್ಠಿ..!

Date:

400 ವರ್ಷಗಳ ಇತಿಹಾಸ ಪ್ರಸಿದ್ಧ ಬ್ರಹ್ಮರಥಕ್ಕೆ ಕೊನೆಯ ಚಂಪಾಷಷ್ಠಿ..!

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸದ್ಯ ಚಂಪಾ ಷಷ್ಠಿಯ ಸಡಗರ ಮನೆ ಮಾಡಿದೆ.. ಈ ಜಾತ್ರಾ ಮಹೋತ್ಸವದಲ್ಲಿ ಇತಿಹಾಸ ಪ್ರಸಿದ್ದ ಬ್ರಹ್ಮರಥಕ್ಕೆ ಕೊನೆಯ ಚಂಪಾಷಷ್ಠಿಯಾಗಲಿದೆ.. ಹೌದು 400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಈ ತೇರನ್ನ ಇದೇ ಕೊನೆಯ ಬಾರಿಗೆ ಎಳೆಯಲಾಗುತ್ತಿದ್ದು, ನಂತರ ಇತಿಹಾವನ್ನ ಸೇರಲಿದೆ..

ಈ ರಥದ ಇತಿಹಾಸದ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರು ಸಹಿತ, ವೆಂಕಟಪ್ಪ ನಾಯಕ ಈ ರಥವನ್ನ ನಿರ್ಮಿಸಿಕೊಟ್ಟರು ಎಂಬುದಾಗಿ ಹೇಳಲಾಗುತ್ತೆ.. ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳಿಂದ ಈ ರಥದ ರಚನೆಯಾಗಿದೆ. ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ವಿಧಿವಿಧಾನ, ನಿಯಮ ಅನುಸರಿಸಿ ರಚಿಸಿದ್ದಾಗಿದೆ.

ಇಷ್ಟೊಂದು ಪುರಾತನವಾದ ಈ ರಥ ಈಗ ಶಿಥಿಲಾವಸ್ಥೆಯನ್ನ ತಲುಪಿದೆ.. ಹೀಗಾಗೆ ಇದನ್ನ ಈಗ ಬಳಸಲು ಸಾಧ್ಯವಿಲ್ಲದ ಕಾರಣ, ಈ ರಥದ ಸ್ಥಾನವನ್ನ 1.99 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಮಾಡಲಿರುವ ಹೊಸ ರಥ ತುಂಬಲಿದೆ.. ಇನ್ನು ಪುರಾತನ ರಥವನ್ನ ಇದುವರೆಗು ಭಕ್ತಾದಿಗಳು ಎಳೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನ ಈಡೇರಿಸಿಕೊಂಡಿದ್ರು, ಇನ್ನು ಮುಂದೆ ಕೇವಲ ನೆನಪಾಗಿ ಉಳಿಯಲಿರುವ ಈ ರಥದ ಚಲನೆ ಇಲ್ಲಿಗೆ ನಿಲ್ಲಲಿದೆ..

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...