ಕರ್ನಾಟಕದ ಮುಖ್ಯಮಂತ್ರಿಯಾದ ಬಳಿಕ ಸನ್ಮಾನ್ಯ ಕುಮಾರಸ್ವಾಮಿ ಅವರಿಗೆ ಇದು ಮೊದಲೆ ಹುಟ್ಟುಹಬ್ಬವಾಗಿದೆ.. ಆದರೆ ಇಂದು ತಮ್ಮ ಜನ್ಮದಿನವನ್ನ ತೀರಾ ಸರಳವಾಗಿ ಆಚರಿಸಿಕೊಂಡಿದ್ದಾರೆ ಹೆಚ್ ಡಿಕೆ..ಎಂದಿನಂತೆ ಇಂದು ಮುಖ್ಯಮಂತ್ರಿಗಳಿಗೆ ಶುಭಾಶಯ ತಿಳಿಸಲು ಸಾರ್ವಜನಿಕರಿಗೆ, ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಸಿಎಂ ಸಿಗೋದಿಲ್ಲ.. ಇಡೀ ದಿನವನ್ನ ತಮ್ಮ ಕುಟುಂಬದ ಜೊತೆಗೆ ಕಳೆಯಲು ನಿರ್ಧಾರ ಮಾಡಿದ್ದು, ಜೆಪಿ ನಗರ ನಿವಾಸಕ್ಕೆ ಯಾರು ಬರದಂತೆ ಮನವಿ ಮಾಡಿದ್ದಾರೆ..
ಇನ್ನು ಬೆಳಗಾವಿ ಅಧಿವೇಶನದ ನಂತರ ಸಿಎಂ ಅವರನ್ನ ಭೇಟಿ ಮಾಡಿ ಶುಭಾಶಯ ತಿಳಿಸಬಹುದಾಗಿದೆ.. ಶುಭಾಶಯ ತಿಳಿಸುವ ಬ್ಯಾನರ್ ಗಳನ್ನ ಅಳವಡಿಸದಂತೆ ಮನವಿ ಮಾಡಿದ್ದು, ನಿಮ್ಮ ಹಾರೈಕೆಯೆ ನನಗೆ ಶ್ರೀರಕ್ಷೆ ಎಂದು ಸಂದೇಶವನ್ನ ರವಾನೆ ಮಾಡಿದ್ದಾರೆ…