ಕೆಜಿಎಫ್ ಅಭಿಮಾನಿಗಳ ಬಳಿ ಮನವಿ ಮಾಡಿದ ಚಿತ್ರತಂಡ.. ಏನು ಗೊತ್ತಾ..?
ಕೆಜಿಎಫ್ ಸಿನಿಮಾ ಇದೇ ವಾರ ತೆರೆಗೆ ಬರ್ತಿದೆ..ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ವಿಶ್ವಾದ್ಯಂತೆ 2000 ಸ್ಕ್ರೀನ್ ಗಳನ್ನ ಆವರಿಸಿಕೊಳ್ತಿದೆ.. ಹೀಗಾಗೆ ಕನ್ನಡದ ಪ್ರತಿಷ್ಠಿತ ಸಿನಿಮಾದ ಮೇಲೆ ಪೈರಸಿ ಮಂದಿಯ ಕಣ್ಣು ಬಿದ್ದಿದೆ.. ರೋಬೊ.2 ನಂತಹ ಚಿತ್ರವನ್ನೆ ಪೈರಸಿ ಮಾಡಿ ಅಪ್ ಲೋಡ್ ಮಾಡಿದ್ದು ನಿಮಗೆ ಗೊತ್ತೆ ಇದೆ.. ಈಗ ಇವರ ನೆಕ್ಸ್ಟ್ ಟಾರ್ಗೆಟ್ ಕೆಜಿಎಫ್..
ಅಕಸ್ಮಾತ್ ಕೆಜಿಎಫ್ ಸಿನಿಮಾ ಪೈರಸಿ ಆಗಿ ಬಿಟ್ರೆ, ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.. ಯಾಕಂದ್ರೆ ಚಿತ್ರದ ಕಲೆಕ್ಷನ್ ಪಾತಾಳ ಸೇರಿಬಿಡುತ್ತೆ..ಹೀಗಾಗೆ ಸಿನಿಮಾ ಟೀಮ್ ಚಿತ್ರ ವೀಕ್ಷಿಸಲು ಬರುವವರಿಗೆ ಮನವಿ ಮಾಡಿದೆ.. ಯಾವುದೇ ಕಾರಣಕ್ಕೂ ಸಿನಿಮಾದ ದೃಶ್ಯಗಳನ್ನ ಸೆರೆ ಹಿಡಿಯುವುದು, ಫೇಸ್ ಬುಕ್ ಲೈವ್ ಮಾಡುವುದು, ಇಂತಹ ಕೆಲಸವನ್ನ ಮಾಡಬೇಡಿ ಎಂದಿದ್ದಾರೆ.. ಜೊತೆಗೆ ಈ ಬಗ್ಗೆ ನಿಮಗೆ ತಿಳಿದರೆ ಕೂಡಲೇ ಡಿಲೀಟ್ ಮಾಡುವಂತೆ ತಿಳಿಸಿ.. ಪೈರಸಿಯಂತಹ ಘಟನೆಗಳ ಬಗ್ಗೆ ತಿಳಿದರೆ ಕೂಡಲೇ 8978650014 ಗೆ ವಾಟ್ಸಾಪ್ ಕಳುಹಿಸಿ ಎಂದಿದ್ದಾರೆ..