2 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ ವೈದ್ಯ ಜಯಚಂದ್ರನ್ ವಿಧಿವಶ..!
ವೈದೋ ನಾರಾಯಣ ಹರಿ ಎಂಬ ಮಾತಿಗೆ ಇಂತಹ ವ್ಯಕ್ತಿಗಳು ಉದಾಹರಣೆಯಾಗುತ್ತಾರೆ.. ಇಂದಿನ ದುಡ್ಡಿನ ದುನಿಯಾದಲ್ಲಿ ಚಿಕಿತ್ಸೆಯು ಸಹ ಬಿಸಿನೆಸ್ ಆಗಿ ಬಿಟ್ಟಿದೆ.. ಆದರೆ ವೈದ್ಯರಾದ ಡಾ.ಜಯಚಂದ್ರನ್ ಕೇವಲ ಎರಡು ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದರು..
ಚೆನ್ನೈನಲ್ಲಿ ನೆಲಸಿದ್ದ ಇವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.. ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಜಯಚಂದ್ರನ್ ಅವರು ಬಡವರ ಪಾಲಿಗೆ ದೇವರಂತಾಗಿದ್ರು.. ಇವರು ತೀರಿಕೊಂಡ ವಿಷಯ ತಿಳಿದು ಸಾವಿರಾರು ಜನ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದಾರೆ..