ಕೆಜಿಎಫ್ ಸಿನಿಮಾ ನಿರೀಕ್ಷೆ ಮೀರಿ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಚಿತ್ರತಂಡ ಎರಡೇ ದಿನಕ್ಕೆ ಕೋಟಿ ಕೋಟಿ ಬಾಚ್ಚಿಕೊಂಡಿದೆ. ಹೀಗಿರಬೇಕಾದ್ರೆ ಚಿತ್ರತಂಡ ಸಣ್ಣದೊಂದು ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಹೌದು, ಕೆಜಿಎಫ್ ಯಶಸ್ಸು ಕಂಡ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇಲ್ಲಿ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್, ಛಾಯಾಗ್ರಾಹಕ ಭುವನ್ ಗೌಡ, ಖಳನಾಯಕ ಸೇರಿದಂತೆ ಹಲವರು ಈ ಸಕ್ಸಸ್ ಪಾರ್ಟಿಯಲ್ಲಿ ಪಾಲ್ಗೊಂಡರು. ಪಾರ್ಟಿ ಫೋಟೋಗಳು ಇಲ್ಲಿದೆ ನೋಡಿ…