80 ಇಳಿ ವಯಸ್ಸಿನಲ್ಲಿ 65ರ ಪತ್ನಿಗೆ ಮಗು ಕರುಣಿಸಿದ ಅಜ್ಜ..!!
ಹೌದು, ಇದು ಸ್ವತಃ ವೈದ್ಯಕೀಯ ಲೋಕವೇ ಶಾಕ್ ಆದ ಸುದ್ದಿ.. ಮಹಿಳೆ ಋತುಮತಿಯಾಗುವುದು ನಿಂತ ಬಳಿಕ, ಗರ್ಭವತಿಯಾಗೋದು ಕಷ್ಟ.. ಅಕಸ್ಮಾತ್ ಮಗು ಬಯಸಿದರೆ ಐವಿಎಫ್ ಮೂಲಕ ಜನ್ಮ ನೀಡುವು ಸಾಮಾನ್ಯ.. ಆದರೆ 65 ರ ಇಳಿ ವಯಸ್ಸಿನಲ್ಲಿ ಕಾಶ್ಮೀರದ ಪೂಂಜ್ ಜಿಲ್ಲೆಯಲ್ಲಿ ವಾಸವಾಗಿರುವ ಈ ಅಜ್ಜಿ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ..
80 ವರ್ಷದ ಹಕೀಮ್ ದಿನ್ ತಂದೆಯಾಗಿ ಸಂತಸ ಪಡುತ್ತಿದ್ದರೆ, 65ರ ಬಾಣಂತಿ ಅಜ್ಜಿಗು ಮಗುವಾಗಿರುವುದು ಖುಷಿ ಕೊಟ್ಟಿದೆ.. ದೇವರು ಬೆಲೆ ಬಾಳುವ ಉಡುಗೊರೆಯನ್ನ ನೀಡಿದ್ದಾನೆ.. ವಿಶ್ವದಲ್ಲೆ ಹಿರಿಯ ತಾಯಿ ಎಂದು ಕರೆಸಿಕೊಳ್ಳಲು ನನಗೆ ಸಂತಸವಾಗುತ್ತಿದೆ ಎಂದಿದ್ದಾರೆ..
ಈಗಾಗ್ಲೇ ಈ ಇಳಿ ವಯಸ್ಸಿನ ದಂಪತಿಗಳಿಗೆ 10 ವರ್ಷದ ಒಬ್ಬ ಮಗನು ಇದ್ದಾನಂತೆ.. ಸದ್ಯ 65ರ ಇಳಿ ವಯಸ್ಸಿನಲ್ಲಿ ತಾಯಿಯಾಗುವ ಮೂಲಕ ವಿಶ್ವದಲ್ಲೇ ಅತೀ ಹಿರಿಯ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಈ ಮಹಾತಾಯಿ..