ಪ್ರಿನ್ಸ್ ಮಹೇಶ್ ಬಾಬು ಬ್ಯಾಂಕ್ ಅಕೌಂಟ್ ಸೀಜ್..!!
ಟಾಲಿವುಡ್ ನಲ್ಲಿ ಪ್ರಿನ್ಸ್ ಎಂದೆ ಕರೆಸಿಕೊಳ್ಳುವ ಮಹೇಶ್ ಬಾಬು ಅವರ ಬ್ಯಾಂಕ್ ಅಕೌಂಟ್ ಅನ್ನ ಸೇವೆ ತೆರಿಗೆ ಕಟ್ಟದ ಹಿನ್ನಲೆಯಲ್ಲಿ ಸೀಜ್ ಮಾಡಲಾಗಿದೆ..ಇದಕ್ಕೆ ಕಾರಣ ಮಹೇಶ್ ಬಾಬು ಕಳೆದ 10 ವರ್ಷಗಳಿಂದ ಸೇವಾ ತೆರಿಗೆಯನ್ನೆ ಕಟ್ಟಿಲ್ಲ.. ಹೀಗಾಗೆ ಕಾನೂನು ಕ್ರಮಕ್ಕೆ ಜಿಎಸ್ ಟಿ ಇಲಾಖೆಯು ಮುಂದಾಗಿದ್ದು, ಮಹೇಶ್ ಬಾಬು ಹೆಸರಿನಲ್ಲಿರುವ ಎರಡು ಅಕೌಂಟ್ ಗಳನ್ನ ಸೀಜ್ ಮಾಡಲಾಗಿದೆ..
2007 ಮತ್ತು 2008 ರಲ್ಲಿ ಮಹೇಶ್ ಬಾಬು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ರು.. ಈ ಸಂದರ್ಭದಲ್ಲಿ ಅವರು 18.50 ಲಕ್ಷವನ್ನ ತೆರಿಗೆ ಕಟ್ಟಬೇಕಿತ್ತು.. ಆದರೆ ಇದನ್ನ ಕಟ್ಟದೆ ಉಳಿಸಿಕೊಂಡಿದ್ರಿಂದ ಇಂದು ಬಡ್ಡಿ ಸೇರಿಸಿ 73.50 ಲಕ್ಷ ಹಣ ಕಟ್ಟಬೇಕಾಗಿ ಬಂದಿದೆ..
ಈಗಾಗ್ಲೇ ಇವರ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ಅಕೌಂಟ್ ನಿಂದ 42 ಲಕ್ಷವನ್ನ ವಸೂಲಿ ಮಾಡಲಾಗಿದ್ದು, ಐಸಿಐಸಿಐ ಬ್ಯಾಂಕ್ ಖಾತೆಯಿಂದ ಉಳಿದ ಹಣವನ್ನ ವಸೂಲಿ ಮಾಡಲು ಮುಂದಾಗಿದೆ.. ಸದ್ಯ ತಾನು ಕಟ್ಟಬೇಕಾಗಿರುವ ಪೂರ್ಣ ತೆರಿಗೆಯನ್ನ ನೀಡುವವರೆಗೆ ಈ ಖಾತೆಗಳಲ್ಲಿ ಯಾವುದೇ ವ್ಯವಹಾರ ನಡೆಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ..