ನ್ಯೂ ಇಯರ್ ಹೆಸರಲ್ಲಿ ಗುಂಡು ಹಾಕಿ ಗಾಡಿ ಡ್ರೈವ್ ಮಾಡಿದ್ರೆ ಹುಷಾರ್..!!
ಇಂದು ರಾತ್ರಿ 2018 ಕ್ಕೆ ಗುಡ್ಬಯ್ ಹೇಳಿ 2019 ನ್ನ ಬರಮಾಡಿಕೊಳ್ಳಲು ಎಲ್ಲ ಸಿದ್ದತೆ ನಡೆದಿದೆ.. ಬೆಂಗಳೂರಿನ ಬಾರ್ ಪಬ್ ಗಳು ರಾತ್ರಿ 2 ಗಂಟೆವರೆಗೆ ಕಾರ್ಯ ನಿರ್ವಹಿಸಲಿದೆ… ಹೀಗಿರೋವಾಗ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಹೋಗಿ ಮದ್ಯಪಾನ ಮಾಡಿ, ಆನಂತರ ವಾಹನ ಚಾಲನೆ ಮಾಡಿದ್ರೆ ಪೊಲೀಸರು ಫೈನ್ ಹಾಕೋದು ಗ್ಯಾರಂಟಿ..
ಬೆಂಗಳೂರಿನ ಪ್ರಮುಖ ನಗರಗಳಲ್ಲಿ, ರಸ್ತೆಗಳಲ್ಲಿ ನಾಕಾಬಂದಿ ಹಾಕಿ ವಾಹನ ಚಾಲಕರ ತಪಾಸಣೆ ನಡೆಸಲು ಮುಂದಾಗಿದೆ.. ಹೀಗಾಗೆ ನಿಮ್ಮೊಂದಿಗೆ ಕುಡಿಯದ ಗೆಳೆಯರನ್ನ ಡ್ರೈವ್ ಮಾಡಲು ಕರೆದುಕೊಂಡು ಹೋಗಿ.. ಅಥವಾ ಖಾಸಗಿ ಕ್ಯಾಬ್ ಬುಕ್ ಮಾಡಿಕೊಂಡು ಸೇಫ್ ಆಗಿ ಮನೆ ಸೇರಿಕೊಳ್ಳಿ.. ಇಲ್ಲ ಅಂದ್ರೆ ದಂಡ ಕಟ್ಟಬೇಕಾಗಿ ಬರುತ್ತದೆ..