ಅಪ್ಪು ಚಿತ್ರದ ಈ ನಾಯಕಿಗೆ ಹತ್ತನೇ ಕ್ಲಾಸ್ ಮಗನಿದ್ದಾನೆ..!!
ಬಿಂದಾಸ್ ಚಿತ್ರದ ನಾಯಕ ನಟಿ ಹಂಸಿಕಾ ಮೋಟ್ವಾನಿಗೆ ಹತ್ತನೇ ತರಗತಿ ಓದುತ್ತಿರುವ ಮಗ ಇದ್ದಾನೆ ಅಂತೆ ಕೇಳ್ರೋಪ್ಪೊ ಕೇಳಿ.. ಇದು ಗಾಳಿ ಸುದ್ದಿಯಲ್ಲ, ಖುದ್ದು ಹಂಸಿಕಾ ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ರೆ ಮದುವೆ ಯಾವಾಗ ಆಯಿತು? ಯಾರನ್ನ ಮದುವೆ ಆಗಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿರುವುದಂತೂ ಸತ್ಯ.
ನಟಿ ಹಂಸಿಕಾ ಅವರ ಹೊಸ ವರ್ಷದ ಆಶಯ, ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಗ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕಂತೆ. ಇದನ್ನ ನೋಡಿ ಸಂತೋಷ ಪಡಬೇಕಂತೆ ಹಂಸಿಕಾ. ಹಾಗಿದ್ರೆ ಈ ಹತ್ತನೇ ತರಗತಿ ಓದುತ್ತಿರುವ ಮಗ ಯಾರು ಎಂಬ ಕುತೂಹಲವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..
ನಟಿ ಹಂಸಿಕಾ ಅನಾಥಾಶ್ರಮವನ್ನು ನಡೆಸುತ್ತಿದ್ದಾರೆ, ಅದರಲ್ಲಿ 34 ಮಕ್ಕಳಿದ್ದಾರೆ. ಆ ಅನಾಥಾ ಮಕ್ಕಳನ್ನು ತಮ್ಮ ಮಕ್ಕಳಂತೆ ಹಂಸಿಕಾ ನೋಡಿಕೊಳ್ಳುತ್ತಿದ್ದಾರೆ. ಅವರ ಓದಿನ ಬಗ್ಗೆ ಕಾಳಜಿ ವಹಿಸಿ ಅನಾಥಾ ಮಕ್ಕಳಿಗೆ ತಾಯಿ ಪ್ರೀತಿ ತೋರಿಸುತ್ತಿರುವ ಹಂಸಿಕಾ ಅವರ ಕೆಲಸಕ್ಕೆ ಶ್ಲಾಘನೀಯ.