ಪೊಲೀಸರೆಂದರೆ ಹಣಪೀಕುವವರು, ಎಲ್ಲಾ ಮುಗಿದ ಮೇಲೆ ನಿಧಾನಕ್ಕೆ ಘಟನಾ ಸ್ಥಳಕ್ಕೆ ಆಗಮಿಸುವವರು, ಸಾಮಾನ್ಯ ಜನರನ್ನು ಹೆದರಿಸಿ ಹಪ್ತಾ ವಸೂಲಿ ಮಾಡಿ ದುಡ್ಡು ಮಾಡುವವರೆಂಬ ಅಭಿಪ್ರಾಯ ಇದ್ದಿದ್ದೇ..! ಪೋಲಿಸರು ಕಲ್ಲು ಹೃದಯದವರು ಅವರಿಗೆ ಮಾನವೀಯತೆ ಇಲ್ಲ ಎಂತಲೂ ಹಿಂದಿನಿಂದ ಅವರಿಗೆ ಉಗಿದು ಉಪ್ಪಿನಕಾಯಿ ಹಾಕುವ ಜನರಿದ್ದಾರೆ..! ಕೆಲವು ಪೊಲೀಸರು ಮಾಡೋದೇ ಅದನ್ನು..! ಆದರೆ ಎಲ್ಲರೂ ಹಾಗಿರಲ್ಲ..! ಅವರಲ್ಲೂ ಮನುಷ್ಯರು, ಮಾನವೀಯತೆಗೆ ಬೆಲೆಕೊಟ್ಟು, ಸಾಮಾನ್ಯರ ಕಷ್ಟಕ್ಕೆ ಆಗುವವರಿದ್ದಾರೆ..!
ಇಷ್ಟೆಲ್ಲಾ ಪೀಠಿಕೆಗೆ ಕಾರಣ ವೆಂಕಟರಮಣ್ಬ ಹೆಡ್ಕಾನ್ಸ್ಟೆಬಲ್. ಇವರು ಎಲ್ಲಾ ಪೊಲೀಸರಿಗಿಂತಲೂ ಭಿನ್ನ..! ಎಲ್ಲರಂತಲ್ಲ.. ಈ ವೆಂಕಟರಾಮಣ್..! ಸದ್ಯಕ್ಕೆ ತಿಳಿದಿರುವ ಮಾಹಿತಿಯಂತೆ ಇವರು ಆಂದ್ರಪ್ರದೇಶದ ಕಡಪದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸ್ತಾ ಇದ್ದಾರೆ..! ಅದಕ್ಕಿಂತಲೂ ದೊಡ್ಡದಾದ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ ಸಮಾರು 23-24 ವರ್ಷಗಳಿಂದ ಮಾಡ್ತಾ ಬಂದಿದ್ದಾರೆ..! ಆ ಮಹಾಕಾರ್ಯ. ಹೆಣ ಹೊರೋದು..! ಅಂತ್ಯಸಂಸ್ಕಾರ ಮಾಡೋದು..!
ಹೌದು, ವೆಂಟರಮಣ್ ಮನೆಯಿಲ್ಲದವರ, ಯಾರೂ ದಿಕ್ಕಿಲ್ಲದ ಅನಾಥರು ಮರಣಹೊಂದಿದರೆ ಅವರ ಅಂತ್ಯಸಂಸ್ಕಾರವನ್ನು ಪೂರೈಸ್ತಾ ಬಂದಿದ್ದಾರೆ..! ಒಟ್ಟಾರೆ ಇಲ್ಲಿತನಕ ಸುಮಾರು 300ಕ್ಕೂ ಹೆಚ್ಚಿನ ಅನಾಥರ ಅಂತ್ಯ ಸಂಸ್ಕಾರ ಮಾಡಿರಬಹುದು..! ಈ ಅಂತ್ಯಸಂಸ್ಕಾರಕ್ಕೆ ತನ್ನ ಜೇಬಿನಿಂದಲೇ 800-1000 ರೂಪಾಯಿಗಳಷ್ಟು ಖಚರ್ು ಬಳಸ್ತಾರೆ..! ಯಾರಿದ್ದರೆ ಸ್ವಾಮಿ? ಈ ಕಾಲದಲ್ಲಿ ಇಂಥವರು..! ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ..!
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!
ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!
ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!