ಟಗರು ಪುಟ್ಟಿ ಬಾಲಿವುಡ್ ಗೆ ಎಂಟ್ರಿ ಕೊಡ್ತಾರಂತೆ..!! ಇದು ನಿಜನಾ..??
ಕೆಂಡಸಂಪಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಚೆಲುವೆ ಮಾನ್ವಿತಾ ಹರೀಶ್. ಮುದ್ದು ಮುದ್ದಾದ ಈ ಮಂಗಳೂರು ಬೆಡಗಿ, ಶಿವಣ್ಣ ಅಭಿನಯದ ಟಗರು ಚಿತ್ರದ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್ ಮಂದಿ ಕೂಡ ಗುರುತಿಸುವ ಮಟ್ಟಿಗೆ ಯಶಸ್ಸಿನ ಮೆಟ್ಟಿಲು ಏರಿದರು. ನಂತರ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಂದ ಮೆಚ್ಚುಗೆ ಪಡೆದ ಮಾನ್ವಿತಾ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಫೋಟೋಶೂಟ್. ಸದ್ಯಕ್ಕೆ ಮಾನ್ವಿತಾ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರೆ, ಜೊತೆ ಮುಂಬೈನಲ್ಲೇ ಹೊಸತೊಂದು ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.
ಹೀಗಾಗಿ ಬಿಟೌನ್ ಗೆ ನಟಿ ಮಾನ್ವಿತಾ ಹರೀಶ್ ಎಂಟ್ರಿಯಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.