ಬುಮ್ರಾಗೆ ರೆಸ್ಟ್.. ತಂಡ ಸೇರಿಕೊಳ್ಳಲ್ಲಿದ್ದಾರೆ ಆರ್ ಸಿಬಿ ಬೌಲರ್ ಆಗಿ ಹೆಸರು ಗಳಿಸಿದ ಸಿರಾಜ್..!
ಸದ್ಯ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಮ್ಯಾಚ್ ಗೆದ್ದು ಬೀಗುತ್ತಿರುವ ಟೀಮ್ ಇಂಡಿಯಾ ಅಲ್ಲಿಯೇ ನಡೆಯಲಿರುವ ಏಕದಿನ ಸರಣಿಗೆ ತಯಾರಿ ನಡೆಸಿದೆ.. ಹೀಗಾಗೆ ರೋಹಿತ್ ಶರ್ಮಾ ಸೇರಿದಂತೆ ಧೋನಿ ತಂಡವನ್ನ ಸೇರಿಕೊಂಡಿದ್ದಾರೆ.. ಈ ನಡುವೆ ಬೌಲಿಂಗ್ ಬ್ಯಾಕ್ ಬೋನ್ ಎಂದು ಗುರುತಿಸಿಕೊಳ್ಳುತ್ತಿರುವ ಬುಮ್ರಾ ಗೆ ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯಿಂದ ರೆಸ್ಟ್ ನೀಡಲಾಗಿದೆ..
ಈಗ ಇವರ ಸ್ಥಾನವನ್ನ ಆರ್ ಸಿಬಿಯಲ್ಲಿ ಗುರುತಿಸಿಕೊಂಡಿರುವ ವೇಗಿ ಮೊಹಮ್ಮದ್ ಸಿರಾಜ್ ತುಂಬಲ್ಲಿದ್ದಾರೆ.. ಇವರೊಂದಿಗೆ ಕೌಲ್ ಗು ತಂಡವನ್ನ ಕೂಡಿಕೊಳ್ಳುವಂತೆ ಸೂಚಿಸಲಾಗಿದೆ.. ಬುಮ್ರಾ ಅವರನ್ನ ಆಸ್ಟ್ರೇಲಿಯಾ ಮಾತ್ರವಲ್ಲದೇ ನ್ಯೂಜಿಲೆಂಡ್ ಸೀರಿಸ್ ನಿಂದಲು ಹೊರಗಿಡಲಾಗಿದ್ದು, ರೆಸ್ಟ್ ನೀಡಲಾಗಿದೆ.. ಮುಂಬರಲಿರುವ ವಿಶ್ವಕಪ್ ಅನ್ನ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ..