ಉತ್ತರ ಪ್ರದೇಶದ ಪ್ರಯಾಗ್ ರಾಜ್ ರೈಲು ನಿಲ್ದಾಣದಲ್ಲಿ ಕೇಳಲಿದೆ ಕನ್ನಡ ಭಾಷೆ..!!
ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮಾಗಮವೆನಿಸಿರುವ ಕುಂಭಮೇಳಕ್ಕೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಚಾಲನೆ ಸಿಕ್ಕಿದ್ದು, 50 ದಿನಗಳ ಕಾಲ ಕುಂಭಮೇಳದ ಅಂಗವಾಗಿ ಭಕ್ತಾಧಿಗಳ ಮಹಾ ಪ್ರವಾಹವೇ ಇಲ್ಲಿಗೆ ಹರಿದುಬರಲಿದೆ..
ಹೀಗಾಗೆ ಉತ್ತರ ಪ್ರದೇಶದ ಅಲಹಾಬಾದ್ ( ಪ್ರಯಾಗ್ ರಾಜ್) ರೈಲು ನಿಲ್ದಾಣದಲ್ಲಿ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ರೈಲು ಸಂಚಾರದ ಬಗ್ಗೆ ಮಾಹಿತಿಯನ್ನ ನೀಡಲು ತೀರ್ಮಾನಿಸಲಾಗಿದೆ.. ಹೌದು, ಸದ್ಯ ಹಿಂದಿಯೇತರ ಭಾಷೆಗಳ ಭಕ್ತರು ಸಹ ಈ ಕುಂಭಮೇಳಕ್ಕೆ ಆಗಮಿಸುತ್ತಿರುವುದರಿಂದ ಈ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, ಕನ್ನಡ, ತಮಿಳು, ಮಲಯಾಳಂ, ಮರಾಠಿ, ಗುಜರಾತಿ, ಇಂಗ್ಲೀಷ್ ಭಾಷೆಯಲ್ಲಿ ಸ್ವಯಂಕೃತವಾಗಿ ತರ್ಜುಮೆ ಮಾಡುವ ಸಾಫ್ಟ್‌ವೇರ್ ವ್ಯವಸ್ಥೆಯನ್ನ ಈ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ..
ಈ ಮೂಲಕ ದೇಶದ ಮೂಲೆಮೂಲೆಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲ್ಲಿದ್ದು, ಇಂತಹದೊಂದು ಭಾಷಾ ತರ್ಜುಮೆ ಸಾಫ್ಟ್‌ವೇರ್ ಅನ್ನ ಅಳವಡಿಸಲು ಕುಂಭಮೇಳಕ್ಕು ಮುಂಚಿತವಾಗಿ ಆಲೋಚನೆ ಮಾಡಲಾಗಿತ್ತು ಎಂದು ಅಲ್ಲಿನ ರೈಲ್ವೇ ಅಧಿಕಾರಿಗಳು ಸ್ಪಷ್ಟಪಡೆಸಿದ್ದಾರೆ…