ಬರ್ತಿದೆ ಹೊಸ ರೂಲ್ಸ್..!! ವಾರದಲ್ಲಿ 4 ದಿನ ಕೆಲ್ಸ..!! 3 ದಿನ ರಜೆ..!
ಈಗಾಗ್ಲೇ ಹಲವು ಕಂಪನಿಗಳಲ್ಲಿ ವಾರಕ್ಕೆ ಎರಡು ದಿನ ರಜೆ ನೀಡಲಾಗುತ್ತಿದೆ.. ಶನಿವಾರ ಹಾಗು ಭಾನುವಾರ ರಜೆ ನೀಡಲಾಗುತ್ತಿದ್ದು, ಇನ್ನುಳಿದ 5 ದಿನ ಕೆಲಸ ಇರುತ್ತದೆ.. ಸೋಮವಾರದಿಂದ ಶುಕ್ರವಾದ ವರೆಗೆ ದುಡಿಯುವ ಉದ್ಯೋಗಿಗಳಿಗೆ ಈಗ ಮತ್ತೊಂದು ಖುಷಿಯಾದ ವಿಚಾರ ಹೇಳೋಕಿದೆ.. ಅದು ಇನ್ನು ಮುಂದೆ ವಾರದಲ್ಲಿ ಕೇವಲ 4 ದಿನ ಕೆಲಸ ಮಾಡಿ 3 ರಜೆ ತಗೊಂಡ್ರೆ ಹೆಂಗೆ ಅನ್ನೋದು..
ವಾರದ 5 ದಿನ ಸತತವಾಗಿ ಕೆಲಸ ಮಾಡಿಸುವ ಬದಲು ಎರಡು ದಿನ ಕೆಲಸ ಒಂದು ರಜೆ ಹೀಗೆ ಮಾಡಿದ್ರೆ ಹೇಗೆ ಅನ್ನೋ ಆಲೋಚನೆ ಮೂಡಿದೆ.. ಅಂದ್ರೆ ಸೋಮವಾರ ಮಂಗಳವಾರ ಕೆಲಸ ಬುಧವಾರ ರಜೆ.. ಗುರುವಾರ ಶುಕ್ರವಾರ ಕೆಲಸ ಶನಿವಾರ ಭಾನುವಾರ ರಜೆ.. ಇಂತಹ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ.. ಈ ಕುರಿತು ಸಿಇಒಗಳು, ನಿಯಮ ರೂಪಿಸುವವರು, ಸಾಮಾಜಿಕ ತಜ್ಞರು, ಮಾನವ ಶಾಸ್ತ್ರಜ್ಞರು ವರ್ಲ್ಡ್ ಎಕನಾಮಿಕ್ ಪೋರಮ್ ನಲ್ಲಿ ಚರ್ಚೆ ನಡೆಸುತ್ತಿದ್ದಾರೆ…
3 ದಿನ ರಜೆ ಇಂದ ಆಗುವ ಅನೂಕೂಲಗಳೇನು.?
ವಾರ ಪೂರ್ತಿ ಕೆಲಸ ಮಾಡಿಸುವ ಬದಲು ಎರಡು ದಿನಕ್ಕೊಂದು ರಜೆ ನೀಡಿದ್ರೆ, ಉದ್ಯೋಗಿಗಳು ತಮ್ಮ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗುತ್ತೆ ಹಾಗು ಕೆಲಸ ಮಾಡಲು ಉದ್ಯೋಗಿಗಳಲ್ಲಿ ಉತ್ಸಾಹ ಹೆಚ್ಚುತ್ತದೆ ಎಂದು ಮಾನವ ಶಾಸ್ತ್ರಜ್ಞ ಆಡಮ್ ಗ್ರ್ಯಾಂಟ್ ಮತ್ತು ಲೇಖಕ ರಟ್ನರ್ ಬ್ರೆಗ್ ಮನ್ ವಿವರಿಸಿದ್ದಾರೆ…
ಇನ್ನು ನ್ಯೂಜಿಲೆಂಡ್ ನ ಕಂಪನಿಯೊಂದು ವಾರದಲ್ಲಿ 4 ದಿನಗಳ ಕೆಲಸದ ಅವಧಿಯನ್ನ ಈಗಾಗ್ಲೇ ನಿಗದಿ ಪಡಿಸಿದ್ದು, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನ ಸಹ ಇಲ್ಲಿ ಉಲ್ಲೇಖಿಸಲಾಗಿದೆ.