ಪೈಲೆಟ್ ನ ಆ ಒಂದು ಎಡವಟ್ಟಿನಿಂದ 51 ಜನ ಪ್ರಮಾಣಿಕರು ಬಲಿಯಾಗಬೇಕಾಯಿತು..!!
ಬಾಂಗ್ಲಾದೇಶದ ಢಾಕಾದಿಂದ ಕಠ್ಮಂಡುಗೆ ಬಂದಿಳಿಯಬೇಕಾಗಿದ್ದ ಯುಎಸ್ -ಬಾಂಗ್ಲಾದ ಏರ್ ಲೈನ್ಸ್ ವಿಮಾನ ಮಾರ್ಚ್ 12 ರ ಮಧ್ಯಾಹ್ನ ಭೂ ಸ್ಪರ್ಶ ಮಾಡುವ ಸಂದರ್ಭದಲ್ಲಿ ರನ್ ವೇಯಿಂದ ಮುಂದೆ ಹೋಗಿ ಅವಘಡಕ್ಕೀಡಾಗಿ 51 ಮಂದಿ ದಾರುಣವಾಗಿ ಸಾವನ್ನಪಿದ್ರು.. ನಂತರ ಈ ಘಟನೆಯ ಬಗ್ಗೆ ತನಿಖೆಯನ್ನ ಕೈಗೊಳ್ಳಲಾಗಿತ್ತು.. ಸದ್ಯ ವಿಮಾನ ಪತನ ಹಾಗು ದುರಂತಕ್ಕೆ ಪೈಲೆಟ್ ನ ಎಡವಟ್ಟೇ ಕಾರಣವೆಂದು ತಿಳಿದು ಬಂದಿದೆ..
ಕಾಕ್ ಪಿಟ್ ನಲ್ಲಿ ಪೈಲೆಟ್ ಧೂಮಪಾನ ಮಾಡಿರುವುದೇ ದುರಂತಕ್ಕೆ ಕಾರಣವಾಗಿದೆ.. ವಿಮಾನಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ.. ಹೀಗಿದ್ರು ಪೈಲೆಟ್ ಧೂಮಪಾನ ಮಾಡಿರೋದು ಘಟನೆಗೆ ಬಲವಾದ ಕಾರಣ ಎಂದು ತಿಳಿದು ಬಂದಿದೆ.. ಇದರ ಜೊತೆಗೆ ವಿಮಾನ ಸಿಬ್ಬಂದಿಗಳು ಘಟನೆಯನ್ನ ನಿಭಾಯಿಸುವಲ್ಲಿ ವಿಫಲವಾಗಿರೋದು ಇಷ್ಟು ಜನರ ಪ್ರಾಣಿ ತೆಗೆದಿದೆ ಎಂದು ವರದಿ ಮಾಡಿದೆ..