ಆರ್ಯ ವೈಶ್ಯರ ಏಳಿಗೆಗೆ ಬಿ.ಶಿಪ್ ವಾಕಾಥಾನ್.. ಇದೇ ಫೆ. 3ಕ್ಕೆ..
ಬೆಂಗಳೂರಿನಲ್ಲಿ 5 ಕಿ.ಮೀ ವಾಕಾಥಾನ್ ಅನ್ನ ಆಯೋಜಿಸಲಾಗಿದೆ.. ಸುಮಾರ ಮೂರು ಸಾ್ವಿರ ಮಂದಿ ಈ ವಾಕಾಥಾನ್ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಗಳಿದೆ.. ಅಂದಹಾಗೆ ಈ ವಾಕಾಥಾನ್ ಉದ್ದೇಶ, ಆರ್ಯ ವೈಶ್ಯ ಸಮುದಾಯದ ಏಳಿಗೆಯ ಸಲುವಾಗಿ ಫರ್ಸ್ಟ್ ಆರ್ಯ ವೈಶ್ಯ ಬಿಸಿನೆಸ್ ನೆಟ್ ವರ್ಕಿಂಗ್ ಗ್ರೂಪ್ ನ ‘ಬಿ ಶಿಪ್‘ ಸಂಸ್ಥೆಯು ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ..
ಇದರಲ್ಲಿ ನಿಮಗೆ ಪಾಲ್ಗೊಳ್ಳುವ ಇಚ್ಛೆ ಇದ್ರೆ ಕೇವಲ 499 ರೂಗಳನ್ನ ನೀಡಿ ಪ್ರವೇಶ ಪಡೆಯಬಹುದು.. ಜಯಮಗರದ ಮಾಧವ ಉದ್ಯಾನ ಬಳಿಯ ರಾಣಿ ಚೆನ್ನಮ್ಮ ಮೈದಾನದಿಂದ ‘ಬಿ ಶಿಪ್ ವಾಕಾಥಾನ್ -2019′ ಶುರುವಾಗಲಿದೆ.. 5 ಕಿ.ಮೀ ನ ಈ ವಾಕಾಥಾನ್ ನಲ್ಲಿ ಹಲವು ಬಗೆಯ ಮನರಂಜನೆ ಕಾರ್ಯಕ್ರಮಗಳನ್ನ ಕೈಗೊಂಡಿರೋದು ವಿಶೇಷ.. ಅವಕಾಶ ಸಿಕ್ಕಾಗ ನಡೆಯಿರಿ, ಜೊತೆ ಜೊತೆಯಾಗಿ ಮಾತಾಡಿ ಹಾಗೂ ಸಮುದಾಯಕ್ಕಾಗಿ ಒಗ್ಗೂಡಲು ಜೊತೆ ಜೊತೆಗೆ ಹೆಜ್ಜೆ ಹಾಕಿ ಎಂಬ ಧ್ಯೇಯ ವಾಕ್ಯಗಳೊಂದಿಗೆ ಈ ವಾಕಾಥಾನ್ ನಡೆಯಲಿದೆ…
ಇನ್ನು ಈ ಕಾರ್ಯಕ್ರಮದ ಆರ್ಗನೈಜರ್ ಆದ ಗುರು ಚರಣ್ ಅವರು ಮಾತನಾಡಿ ‘ ಸಮುದಾಯವನ್ನ ಒಗ್ಗೂಡಿಸುವಿಕೆಯ ಸದುದ್ದೇಶದಿಂದ ಈ ವಾಕಾಥಾನ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ, ಇದರೊಂದಿಗೆ ಲೈವ್ ಮ್ಯೂಸಿಕ್, ಆರೋಗ್ಯದ ಬಗ್ಗೆ ಜಾಗೃತಿ ರಿಫ್ರೆಶ್ ಮೆಂಟ್ ಪ್ರೋಗ್ರಾಂಗಳನ್ನ ಕೂಡ ಈ ವಾಕಾಥಾನಲ್ಲಿ ಅಳವಡಿಸಲಾಗಿದ್ದು, ಏರೋಬಿಕ್ ಸಹ ಹೇಳಿ ಕೊಡಲಾಗುತ್ತದೆ ಅಂತ ತಿಳಿಸಿದ್ದಾರೆ..
ಭಾಗ್ಯಲಕ್ಷ್ಮಿ ಫುಡ್ ಹಾಗೂ ಡಿಫಿ (ಡೈಮಂಡ್ ಫೆಸೆಟ್ಸ್) ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ. ಪಾರದರ್ಶಕ, ಕಾನೂನೂ ಬದ್ಧ, ಎಥಿಕಲ್ ಮನೋಭಾವದಿಂದ ವ್ಯಾಪರ ನಡೆಸುವ ಆರ್ಯ ವೈಶ್ಯ ಸಮುದಾಯದ ವ್ಯಾಪಾರಿಗಳ ಪ್ರೋತ್ಸಾಹಕ್ಕೆ ಬಿ.ಶಿಪ್ ಆದ್ಯತೆಯನ್ನೂ ಈ ವಾಕಾಥಾನ್ ಮೂಲಕ ನೀಡಲಿದೆ. ಜೊತೆಗೆ ವ್ಯಾಪಾರೋದ್ಯಮದ ನಡುವೆ ಸಮುದಾಯದ ವ್ಯಾಪಾರಿಗಳಿಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವಂತೆ ಸೂಕ್ತ ಸಲಹೆಗಳನ್ನು ನೀಡಲಿದೆ ಎಂದರು.
ನಾವೇಕೆ ವಾಕಾಥಾನ್ ನಲ್ಲಿ ಪಾಲ್ಗೊಳ್ಳಬೇಕು ಎನ್ನುವವರಿಗೆ ಇಲ್ಲಿವೆ 10 ಕಾರಣಗಳು
• 5 ಕೆ (5 ಸಾವಿರ ಮೀಟರ್)
• ಪ್ರುಬುದ್ಧರೆಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ
• ನೀವು ಇತರರಿಗಿಂತ ಭಿನ್ನವಾಗಿ ಹಾಗೂ ಅದ್ಭುತವಾಗಿ ಕಾಣುತ್ತೀರಿ
• ಆರ್ಯ ವೈಶ್ಯರ ಒಗ್ಗಟ್ಟಿನ ಶಕ್ತಿ ಪ್ರದರ್ಶನ ನಡೆಯಲಿದೆ
• ಆರ್ಯ ವೈಶ್ಯ ಸಮುದಾಯದ ಇತರರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ
• ವ್ಯಾಪಾರ ಸಂಪರ್ಕ ವೃದ್ಧಿಸಲಿದೆ
• ಗಾಢವಾದ ಸ್ನೇಹ ಸಂಬಂಧ ಬೆಳೆಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಾಣ
• ಆರ್ಯ ವೈಶ್ಯ ಸಮುದಾಯದ ಪ್ರಸಿದ್ಧರ ಬಗ್ಗೆ ಅರಿವಾಗುತ್ತದೆ
• ಹೊಸ ಸಹಭಾಗಿತ್ವವೊಂದು ನಿಮಗೆ ಸಿಗಲಿದೆ
ವಾಕಾಥಾನ್ ಸಾಗುವ ಮಾರ್ಗ: ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಿಂದ ಹೊರಡುವ ವಾಕಾಥಾನ್ ಅಶೋಕ ಪಿಲ್ಲರ್, ಆರ್.ವಿ.ಟೀಚರ್ಸ್ ವೃತ್ತ, ಸೌತ್ ಎಂಡ್ ಸರ್ಕಲ್, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ 3 ನೇ ಹಂತದ ವೃತ್ತದ ಮೂಲಕ ಸಾಗಿ ಮತ್ತೆ ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ತಲುಪಲಿದೆ.
ಸಂಪರ್ಕ: +91 98452 22522 (ಚರಣ್)
ಆರ್ಯ ವೈಶ್ಯರ ಏಳಿಗೆಗೆ ಬಿ.ಶಿಪ್ ವಾಕಾಥಾನ್.. ಇದೇ ಫೆ. 3ಕ್ಕೆ..