ಪುನೀತ್ ರಾಜಕುಮಾರ್ ಅಭಿನಯದ ನಟಸರ್ವಾಭೌಮ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅಭಿಮಾನಿಗಳಂತೂ ಹುಚ್ಚೆಂದು ಕಾಯುತ್ತಿರುವುದು ಎಲ್ಲೆಡೆ ಕಂಡು ಬಂದಿದೆ. ಈ ಸಂದರ್ಭದಲ್ಲಿ ಅಭಿಮಾನಿಯೋರ್ವ ಬೆಳಿಗ್ಗೆ 4 ಗಂಟೆಯ ಶೋಗೆ ಇಡಿ ಥಿಯೇಟರ್ ನ್ನೇ ಬುಕ್ ಮಾಡಿದ್ದಾನೆ.
ಅಪ್ಪು ಅಭಿಮಾನಿ ಊರ್ವಶಿ ಥಿಯೇಟರ್ ನಲ್ಲಿ 1300 ಟಿಕೆಟ್ ಖರೀದಿಸುವ ಮೂಲಕ ತನ್ನ ಅಭಿಮಾನದ ಪರಾಕಾಷ್ಠೆಯನ್ನೆ ಮೆರೆದಿದ್ದಾನೆ. ಇನ್ನು ಅಪ್ಪು ಮೊದಲಿನಿಂದಲೂ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಈ ಚಿತ್ರದಲ್ಲೂ ಪುನೀತ್ ಹಿಂದೆಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಿರ್ವಹಣೆ ಮಾಡಿರುವ ಪಾತ್ರದ ಮೇಲೆ ಆತ್ಮ ಬರಲಿದೆ.
ನಟಸರ್ವಾಭೌಮವಿಶ್ವಾದ್ಯಂತಏಕಕಾಲಕ್ಕೆಬಿಡುಗಡೆ ಫೆ.7 ರಂದು ಬಿಡುಗಡೆಯಾಗಲಿರುವ ಪುನೀತ್ ರಾಜ್ ಕುಮಾರ್ ನಟನೆಯ ನಟ ಸಾರ್ವಭೌಮ ಚಿತ್ರ, ವಿದೇಶಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಅಪ್ಪು 10 ವರ್ಷಗಳ ನಂತರ ರಾಕ್ ಲೈನ್ ವೆಂಕಟೇಶ ನಿರ್ಮಾಣದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.