ಆನ್ ಲೈನ್ ಶಾಪಿಂಗ್ ಗ್ರಾಹಕರೆ ಎಚ್ಚರ..!! ಇನ್ಮುಂದೆ ಸಿಗಲ್ಲ ಕ್ವಿಕ್ ಡೆಲಿವರಿ..!!
ಸದ್ಯ ಆನ್ ಲೈನ್ ಮಾರುಕಟ್ಟೆ ದೊಡ್ಡ ಉದ್ಯಮವಾಗಿ ಬೆಳೆದಿದೆ.. ಮೊಬೈಲ್ ನಲ್ಲಿ ಬುಕ್ ಮಾಡಿದ ವಸ್ತುಗಳು ಮನೆ ಬಾಗಿಲಿಗೆ ಬಂದು ಬಿಡುತ್ತೆ.. ಅದರಲ್ಲು ಕೆಲವೊಮ್ಮೆ ವಾರಗಟ್ಟಲೆ ಕಾಯ ಬೇಕಾದ ಅವಶ್ಯಕತೆಯು ಇರೋದಿಲ್ಲ.. ಒಂದು ನೂರು ರೂಪಾಯಿ ಜಾಸ್ತಿ ಕೊಟ್ರೆ ಒಂದೇ ದಿನದ ಅಂತರದಲ್ಲಿ ನಿಮ್ಮ ಆರ್ಡರ್ ನಿಮ್ಮ ಮನೆ ಬಾಗಲಿಗೆ ಬಂದು ತಲುಪುತ್ತೆ…ಆದರೆ ಮುಂದಿನ ದಿನಗಳಲ್ಲಿ ವಾರಗಟ್ಟಕೆ ಕಾಯಬೇಕಾಗುತ್ತದೆ..
ಹೌದು, ಇನ್ನೂ ಮುಂದೆ ಈ ರೀತಿ ಕ್ವಿಕ್ ಡೆಲಿವರಿ ಆಪ್ಶನ್ ಇರೋದಿಲ್ಲ.. ಯಾಕಂದ್ರೆ ಇದಕ್ಕೆ ಸರ್ಕಾರ ಹೊರಡಿಸಿರುವ ನಿಯಮ ಕಾರಣವಾಗಿದೆ.. ಇ– ಕಾಮರ್ಸ್ ನಲ್ಲಿ ಹೊಸ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ ಬಂದಿದೆ.. ಇದರ ಅನುಸಾರ ಕ್ವಿಕ್ ಡೆಲಿವರಿ ಆಯ್ಕೆ ಸಿಗುವುದಿಲ್ಲ.. ಇದರಿಂದ ಆನ್ ಲೈನ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಹಾಗಾಗಿದೆ..
ಸದ್ಯ ಆನ್ ಲೈನ್ ಬ್ಯುಸಿನೆಸ್ ಗೆ ಕಡಿವಾಣ ಹಾಕುವ ಸಲುವಾಗಿ ಈ ರೀತಿ ಕ್ರಮಕ್ಕೆ ಮುಂದಾಗಿದೆ ಮೋದಿ ಸರ್ಕಾರ ಎನ್ನಲಾಗ್ತಿದೆ.. ಇದರಿಂದ ಜನತೆ ಮಧ್ಯಮ ಗಾತ್ರದ ಗ್ರಾಹಕರನ್ನ ಅವಲಂಭಿಸುತ್ತಾರೆ.. ಈ ಮೂಲಕ ಮಧ್ಯಮ ಉದ್ಯಮವು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ..