ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ. ಈ ಬಾರಿಯೂ ಕೂಡ ವಿದೇಶಿಗರು ತಿರುಗಿ ನೋಡುವಂತೆ ಸುದ್ದಿಯಾಗಿದ್ದಾರೆ. ಹೌದು, ಈ ಬಾರಿ ಅನುಷ್ಕಾ ಶರ್ಮಾ ಸುದ್ದಿಯಾಗಿದ್ದು ಡೂಪ್ಲಿಕೇಟ್ ಅನುಷ್ಕಾ ಶರ್ಮಾ ಅವರಿಂದ.
ಅಮೆರಿಕಾದ ಗಾಯಕಿ ಜೂಲಿಯಾ ಮೈಕಲ್ಸ್ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಬ್ಬರು ಸೇಮ್ ಟು ಸೇಮ್ ಹೋಲುತ್ತಾರೆ. ಈ ಫೋಟೋ ಕಂಡು ಅಭಿಮಾನಿಗಳು ಅಚ್ಚರಿಕೊಂಡಿದ್ದಾರೆ. ಅನುಷ್ಕಾ ಶರ್ಮ ಅವರನ್ನೇ ಹೋಲುವ ವಿದೇಶಿ ಗಾಯಕಿ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
View this post on Instagram
ಇನ್‍ಸ್ಟಾಗ್ರಾಮ್ ನಲ್ಲಿ ಜೂಲಿಯಾ ಮೈಕಲ್ಸ್ ಫೋಟೋ ನೋಡಿ ಈಕೆ ಅನುಷ್ಕಾ ಅವರ ಫಾರಿನ್ ತಂಗಿ ಇರಬೇಕು ಎಂಬ ಮಾತುಗಳು ಕೇಳಿ ಬರ್ತಿದೆ. ಅಲ್ಲದೆ ಪ್ರಪಂಚದಲ್ಲಿ ಒಬ್ಬರಂತೆ ಏಳು ಮಂದಿ ಇರುತ್ತಾರೆ ಎಂದು ಕೇಳಿದ್ದೀವಿ, ಈಗ ಅಮೆರಿಕ ಗಾಯಕಿ ಮೂಲಕ ಸಾಬೀತಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.