No menu items!
20 C
Munich
Friday, July 3, 2026

ಈ ಬಾರಿ ಮೀಸ್ ಇಲ್ಲ, ಏಪ್ರಿಲ್ 5ರಂದು ತೆರೆಗೆ ಬರ್ತಿದೆ ಕುರುಕ್ಷೇತ್ರ ಚಿತ್ರ: ಮುನಿರತ್ನ

Must read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಿಸಿದ ನಿರ್ಮಾಪಕ ಮುನಿರತ್ನ. ಹೌದು, ಕುರುಕ್ಷೇತ್ರ ಚಿತ್ರ ಏಪ್ರಿಲ್ 5 ರಂದು ರಾಜ್ಯಾದ್ಯಂತ ಬಿಡುಗಡೆ ಆಗುವುದು ಖಚಿತ ಎಂದಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಮುನಿರತ್ನ ಅವರು ಸಿನಿಮಾ ತಡವಾಗಿ ರಿಲೀಸ್ ಆಗಲು ಕಾರಣವೇನು ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಕುರುಕ್ಷೇತ್ರ ಕೋಟಿ ಬಜೆಟ್ ಸಿನಿಮಾ, ಜನರಿಗೆ ಉತ್ತಮ ಚಿತ್ರ ನೀಡುವುದೇ ಮುಖ್ಯ ಉದ್ದೇಶ. ಹೀಗಾಗಿ ಚಿತ್ರ ಉತ್ತಮವಾಗಿ ಮೂಡಿ ಬರುವವರೆಗೆ ರಿಲೀಸ್ ಮಾಡಬಾರದು ಎಂದುಕೊಂಡಿದೆ.ಯಾಕೆಂದರೆ ಕುರುಕ್ಷೇತ್ರ ಪೌರಾಣಿಕ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್ ಕೆಲಸ ಬಾಕಿ ಉಳಿದಿದೆ. ನಾವು ನಿರೀಕ್ಷಿಸಿದ ರೀತಿ ಗ್ರಾಫಿಕ್ಸ್ ಮೂಡಿ ಬಾರದ ಕಾರಣ ಪದೇ ಪದೇ ರೀ ವಾರ್ಕ್ ಮಾಡಲಾಗುತ್ತಿದೆ. ಹೀಗಾಗಿ ಸಿನಿಮಾ‌ ಬಿಡುಗಡೆ ತಡವಾಗಿದೆ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article