ಜೆಡಿಎಸ್ ಗೆ ಗೂಗ್ಲಿ ಹಾಕಿದ ಸುಮಲತಾ ಅಂಬರೀಶ್.. ದೋಸ್ತಿ ಸರ್ಕಾರಕ್ಕೆ ತಲೆ ನೋವು..!!
ಲೋಕಸಭೆ ಎಲೆಕ್ಷನ್ ಹತ್ತಿರವಾಗುತ್ತಿದ್ದ ಹಾಗೆ ಎಲ್ಲೆಡೆ ರಾಜಕೀಯ ಲೆಕ್ಕಚಾರ ನಡೆಯುತ್ತಿದೆ.. ಅದರಲ್ಲು ಕರ್ನಾಟಕದ ಪಾಲಿಟಿಕ್ಸ್ ನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಅತ್ಯಂತ ಹೆಚ್ಚು ಚಟುವಟಿಕೆಗಳಿಂದ ಕೂಡಿದೆ.. ಯಾಕಂದ್ರೆ ಒಂದು ಕಡೆ ಸುಮಲತಾ ಅಂಬರೀಶ್ ಮತ್ತೊಂದು ಕಡೆ ಜೆಡಿಎಸ್ ನಿಂದ ನಿಖಿಲ್ ಕುಮಾರ್ ಸ್ವಾಮಿ.. ಈ ಇಬ್ಬರ ನಡುವೆ ಮಂಡ್ಯದಲ್ಲಿ ಫೈಟ್ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ..
ಒಂದು ಕಡೆ ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧಿಸುವ ಇಂಗಿತವನ್ನ ವ್ಯಕ್ತ ಪಡೆಸಿದ್ದು, ಇತ್ತ ಕಾಂಗ್ರೆಸ್ ಗೆ ತಲೆ ನೋವಾಗುವ ಸಾಧ್ಯತೆ ಇದೆ.. ದೋಸ್ತಿ ಸರ್ಕಾರ ಇರೋದ್ರಿಂದ ಮಂಡ್ಯ ಜೆಡಿಎಸ್ ಭದ್ರ ಕೋಟೆಯಾಗಿರೋದ್ರಿಂದ ಆ ಕ್ಷೇತ್ರವನ್ನ ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ತಮ್ಮ ಬೆಂಬಲ ಜೆಡಿಎಸ್ ಗೆ ಎಂದಿದೆ…
ಈಗ ಸ್ವತಃ ಸುಮಲತಾ ಅಂಬರೀಶ್ ಕಾಂಗ್ರೆಸ್ ನಿಂದ ಟೆಕೆಟ್ ಆಕಾಂಕ್ಷಿಯಾಗಿದ್ದು,ಚುನಾವಣೆಗೆ ಸ್ಪರ್ಧೆ ಮಾಡಿದ್ರೆ ಅದು ಮಂಡ್ಯದಿಂದಲೇ ಎನ್ನುತ್ತಿದ್ದಾರೆ.. ಹೀಗಾಗೆ ಕಾಂಗ್ರೆಸ್ ಗೆ ಟಿಕೆಟ್ ಕೊಡದೆ ಇರಲು ಆಗದ, ಜೆಡಿಎಸ್ ಗೆ ಬೆಂಬಲು ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ.. ಇತ್ತ ಕಡೆ ಇದನ್ನೆ ಬಳಸಿಕೊಳ್ಳುತ್ತಿರುವ ಬಿಜೆಪಿ ಸುಮಲತಾ ಅವರಿಗೆ ತಮ್ಮ ಪಕ್ಷಕ್ಕೆ ಆಹ್ವಾನ ನೀಡುತ್ತಿದೆ.. ಒಟ್ಟಿನಲ್ಲಿ ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಿ ಗೆಲ್ಲಿಸಬೇಕೆಂಬ ಆಸೆಯಲ್ಲಿದ್ದ ಜೆಡಿಎಸ್ ಗೆ ಸುಮಲತಾ ಅವರ ಸ್ಪರ್ಧೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..