ಇನ್ನೆರಡು ತಿಂಗಳು ಡಿಬಾಸ್ ಅಭಿಮಾನಿಗಳದ್ದೆ ಹಬ್ಬ..!!
ಇಂದು ಯಜಮಾನ ಟ್ರೇಲರ್ ರಿಲೀಸ್ ಆಗಿದೆ.. ಯೂಟ್ಯೂಬ್ ನಲ್ಲಿ ಯಜಮಾನ ಹೆಸರಿಗೆ ತಕ್ಕಹಾಗೆ ರಾಜನ ಹಾಗೆ ಟ್ರೆಂಡಿಂಗೆ ಏರಿ ಬಿಟ್ಟಿದ್ದಾನೆ.. ಈ ಮೂಲಕ ಸಿನಿಮಾ ಬರುವಿಕೆಗೆ ಡೇಟ್ ಕೂಡ ಫಿಕ್ಸ್ ಆಗಿದೆ.. ಅದು ಮುಂದಿನ ತಿಂಗಳ ಒಂದನೇ ತಾರೀಖು ಯಜಮಾನ ಸಿನಿಮಾ ತೆರೆಗೆ ಬರಲಿದೆ.. ಈ ಮೂಲಕ ಕುರುಕ್ಷೇತ್ರ ಚಿತ್ರವನ್ನ ಹಿಂದಿಕ್ಕಿ ಯಜಮಾನ ಮೊದಲು ರಿಲೀಸ್ ಆಗ್ತಿದೆ..
ಸದ್ಯ ಕುರುಕ್ಷೇತ್ರ ಇನ್ನು ಪೋಸ್ಟ್ ಪ್ರೊಡೆಕ್ಷನ್ ಹಂತದಲ್ಲಿದೆ.. ಹೇಳಿಕೇಳಿ ದೊಡ್ಡ ಬಜೆಟ್ ಪೌರಾಣಿಕ ಸಿನಿಮಾ.. ಅದು ಅಲ್ಲದೆ ಮೊದಲ ಕನ್ನಡ ತ್ರಿಡಿ ಚಿತ್ರ.. ಹೀಗಾಗೆ ಇದಕ್ಕಾಗಿ ತುಂಬಾ ಟೈಮ್ ಬೇಕಾಗುತ್ತಿದೆ.. ಅದಕ್ಕೆ ಯಜಮಾನ ಮೊದಲೇ ಬರ್ತಿದ್ದಾನೆ.. ಅದಾದ ಒಂದೇ ಒಂದು ತಿಂಗಳ ಅಂತರದಲ್ಲಿ ಕುರುಕ್ಷೇತ್ರ ಕೂಡ ಬಿಡುಗಡೆಗೊಳ್ಳಲ್ಲಿದೆ..
ಈ ಮೂಲಕ ದಚ್ಚು ಅಭಿಮಾನಿಗಳಿಗೆ ಎರಡು ತಿಂಗಳು ಸಿನಿಮಾ ಹಬ್ಬವೇ ಸರಿ.. ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಐರಾವತ ಜಾದು ಸಹ ಶುರುವಾಗಿ ಬಿಡಲಿದೆ.. ಈ ಎರಡು ತಿಂಗಳು ಬೇರ್ಯಾವ ದೊಡ್ಡ ನಟರ ಚಿತ್ರಗಳು ಬಿಡುಗಡೆಯಾಗೋದು ಡೌಟ್ ಇದೆ.. ಬಜಾ಼ರ್ ಗೆ ಬರ್ತಿರೋ ಆನೆಯನ್ನ ಕಟ್ಟಿ ಹಾಕೋದು ತುಂಬಾ ಕಷ್ಟ ಸಾಧ್ಯ..