ಮೋದಿಗೆ ಸವಾಲ್ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ..!
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22 ಕ್ಷೇತ್ರಗಳನ್ನ ಬಿಜೆಪಿ ಗೆಲ್ಲಲಿದೆ ಎಂಬ ಬಿಜೆಪಿಯರವರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.. ಸ್ವತಃ ಮೋದಿ ಅವರೇ ಬಂದು ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲಲಿ ಎಂದು ಸವಾಲ್ ಹಾಕಿದ್ದಾರೆ.. ಇನ್ನು ಯಡಿಯೂರಪ್ಪ ಕುದುರೆ ವ್ಯಾಪಾರ ಮಾಡುತ್ತಿದ್ದು, ಮುಖ್ಯಮಂತ್ರಿ ಆಗಿದ್ದವರು ಹೀಗೆ ಮಾಡಿರೋದು ತಪ್ಪು, ಅವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ನಾಲಾಯಕ್ ಎಂದಿದ್ದಾರೆ…
ಮೋದಿ ಇರೋದೆ ಸುಳ್ಳು ಹೇಳೋಕೆ.. ಈ ಹಿಂದೆ ಎರಡು ಬಾರಿ ರೈತರ ಸಾಲಮನ್ನಾ ಮಾಡುವಂತೆ ನಿಯೋಗ ಹೋಗಿದ್ರು, ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ.. ಆದರೆ ನಾವು ರೈತರ ಸಾಲ ಮನ್ನಾ ಮಾಡಲು ಬಜೆಟ್ ನಲ್ಲಿ ಹಣ ಎತ್ತಿಟ್ಟಿದ್ದೇವೆ ಎಂದಿದ್ದಾರೆ..
ಒಟ್ಟಿನಲ್ಲಿ ಒಂದು ಕಡೆ ಲೋಕಸಭಾ ಚುನಾವಣೆಯ ಕಾವು, ಮತ್ತೊಂದು ಕಡೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಜನತೆಯಲ್ಲಿ ಕುತೂಹಲವನ್ನ ಹುಟ್ಟುಹಾಕಿದೆ..