ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರ ರಾಜವಂಶಸ್ಥ ಯದುವೀರ್ ಒಡೆಯರ್..?? ಈ ಬಗ್ಗೆ ಹೇಳಿದ್ದೇನು..?
ಯದುವೀರ್ ಒಡೆಯರ್ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲಿದ್ದಾರೆ ಎಂಬ ಮಾತು ಕೇಳಿ ಬರ್ತಾನೆ ಇದೆ.. ಜನರ ಜೊತೆಗೆ ಹಾಗೆ ಶಾಲಾ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ಯದುವೀರ್ ಮುಂದಿನ ಲೋಕಸಭಾ ಎಲೆಕ್ಷನ್ ದೃಷ್ಟಿಯಿಂದ ಜನರೊಂದಿಗೆ ಬೆರೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.. ಜೊತೆಗೆ ಈ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಆ ಪಕ್ಷದ ಸ್ಪರ್ಧಿಸ್ತಾರೆ ಅನ್ನೋದು ಸಹ ಇದರೊಂದಿಗಿದ್ದ ಸುದ್ದಿ..
ಈಗ ಈ ಎಲ್ಲದಕ್ಕೂ ಸ್ವತಃ ಯದುವೀರ್ ಒಡೆಯರ್ ಫುಲ್ ಸ್ಟಾಪ್ ಇಟ್ಟಿದ್ದು, ನಾನು ಯಾರ ಪರವು ಹಾಗೆ ಯಾವುದೇ ಪಕ್ಷದ ಪರವಾಗಿಯೂ ಪ್ರಚಾರ ಮಾಡಲ್ಲ.. ಜೊತೆಗೆ ನಾನು ಜನರ ಜೊತೆ ಬೆರೆಯುವುದು ಅರಮನೆ ಜೊತೆಗೆ ಅವರ ಸಂಬಂಧ ಉಳಿಸಿಕೊಳ್ಳೋಕೆ.. ಅರಮನೆಯ ಜೊತೆಗೆ ಎಲ್ಲ ಪಕ್ಷದವರು ಸಹ ಚೆನ್ನಾಗಿದ್ದಾರೆ.. ನಾನು ಲೋಕಸಭೆ ಎಲೆಕ್ಷನ್ ಗೆ ಸ್ಪರ್ಧಿಸುವುದೆಲ್ಲ ಸುಳ್ಳು ಎಂದಿದ್ದಾರೆ..