BSNL ನ 35 ಸಾವಿರ ನೌಕರರನ್ನ ಕೆಲಸದಿಂದ ತೆಗೆದು ಹಾಕಲು ಶಿಫಾರಸ್ಸು..!! ಕಾರಣ..?

Date:

BSNL 35 ಸಾವಿರ ನೌಕರರನ್ನ ಕೆಲಸದಿಂದ ತೆಗೆದು ಹಾಕಲು ಶಿಫಾರಸ್ಸು..!! ಕಾರಣ..?

ಖಾಸಗಿ ಟೆಲಿಕಾಂ ಕಂಪನಿಗಳ ನಡುವೆ ದೇಶದ ಬಿಎಸ್ಎನ್ಎಲ್ ಸಂಸ್ಥೆ ಸೊರಗಿ ಹೋಗಿದೆ.. ಸದ್ಯ ಖಾಸಗಿ ಕಂಪನಿಗಳು ಗ್ರಾಹಕರಿಗೆ ವಿಧವಿಧವಾದ ಆಫರ್ ಗಳನ್ನ ನೀಡುತ್ತಿದ್ದು, ದಿನೇ ದಿನೇ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಕ್ಷೀಣಿಸುತ್ತಿದೆ.. ಹೀಗಾಗೆ ತೀರ್ವ ನಷ್ಟದಲ್ಲಿರುವ ಈ ಸಂಸ್ಥೆಯನ್ನ ಉಳಿಸಿಕೊಳ್ಳುವುದು ಹಾಗು ಸುಧಾರಿಸುವುದು ಹೇಗೆ ಎಂಬ ಸಲುವಾಗಿ ವರದಿ ಸಲ್ಲಿಸುವಂತೆ ಐಐಎಂ ಅಹ್ಮದಾಬಾದ್ ತಜ್ಞರಿಗೆ ತಿಳಿಸಿತ್ತು..

ಇದರ ಶಿಫಾರಸ್ಸಿನ ಪ್ರಕಾರ 35 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡಲು ಸಲಹೆ ನೀಡಲಾಗಿದೆ. ಹೀಗೆ ಕೆಲಸದಿಂದ ತೆಗೆದು ಹಾಕುವರಿಗೆ  ವಿಆರ್ಎಸ್  ನೀಡುವಂತೆ ಸೂಚಿಸಿದ್ದು, ಇದಕ್ಕಾಗಿ ಸರ್ಕಾರ 13000 ಕೋಟಿ ಪಾವತಿಸಬೇಕಾಗಿದೆ.. ಜೊತೆಗೆ ಸದ್ಯ ಇಲ್ಲಿನ ಕೆಲಸಗಾರಿಗೆ ನೀಡುತ್ತಿರುವ ವೈದ್ಯಕೀಯ ಭತ್ಯೆ ಕಡಿತಗೊಳಿಸಲಾಗಿದ್ದು, ಅದರೊಂದಿಗೆ ಎಲ್ಟಿಸಿ, ವಿದ್ಯುತ್ ಹಾಗೂ ಆಡಳಿತಾತ್ಮಕ ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ಈ ಮೂಲಕ ಹಣ ಪೋಲಾಗದಂತೆ ತಡೆಯಲಾಗಿದೆ..

ಕಳೆದ ವರ್ಷದ ತ್ರೈಮಾಸಿಕ ಲೆಕ್ಕದಲ್ಲಿ ಸಂಸ್ಥೆಯು 1925.33 ಕೋಟಿ ನಷ್ಟ ಅನುಭವಿಸಿದೆ.. ಹೀಗೆ ಮುಂದುವರೆದೆ ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನ ಮುನ್ನಡೆಸುವುದು ಮತ್ತಷ್ಟು ಕಷ್ಟ ಎಂಬ ಮಾತು ಕೇಳಿ ಬಂದಿದ್ದು, ಹೀಗಾಗೆ ಈ ನಿರ್ಧಾರವನ್ನ ಮಾಡಲಾಗುತ್ತಿದೆ ಎನ್ನಲಾಗ್ತಿದೆ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...