ತಪ್ಪದೇ ಓದಿ, ಇದು ಮಾನವೀಯತೆ ಮೆರೆದ ಆಟೋಡ್ರೈವರ್ ಸ್ಟೋರಿ..! ಪ್ರಯಾಣಿಕನ ಜೀವ ಉಳಿಸಿ, ಅವನ ಪಾಲಿಗೆ ದೇವರಾದ ಹೃದಯವಂತ ಆಟೋಡ್ರೈವರ್ನ ಇಂಪ್ರೆಸಿವ್ ಸ್ಟೋರಿ..!
ಅವರು ತಮಿಳು ನಾಡಿನ ಆಟೋಡ್ರೈವರ್ ಕೆ.ರವಿಚಂದ್ರನ್. ಪಶ್ಚಿಮ ಬಂಗಾಳದಿಂದ ಬಂದವರನೊಬ್ಬರನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಹೋಗ್ತಾ ಇರ್ತಾರೆ. ಹೀಗೆ ಕರ್ಕೊಂಡು ಹೋಗ್ತಾ ಇರುವಾಗ ಆ ಪ್ರಯಾಣಿಕ ನರಳಾಡ್ತಾ ಇದ್ದದ್ದು ತಿಳಿಯುತ್ತೆ..! ಎದೆ ಹಿಡಿದುಕೊಂಡು ನೋವಿನಿಂದ ನರಳ್ತಾ ಇರ್ತಾರೆ..! ಕೂಡಲೇ ಅವರನ್ನು 16 ಜನ ಆಟೋ ಡ್ರೈವರ್ ಗಳ ಸಹಾಯದಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಕರ್ಕೊಂಡು ಹೋಗ್ತಾರೆ..!
ಆ ಪ್ರಯಾಣಿಕನನ್ನು ಪರೀಕ್ಷಿಸಿದ ವೈದ್ಯರು ರಕ್ತನಾಳಗಳು ಬ್ಲಾಕ್ ಆಗಿದೆ, ಕೂಡಲೇ ಅವರಿಗೆ ಚಿಕಿತ್ಸೆ ನೀಡ್ಬೇಕು, ಪೇಸ್ ಮೇಕರ್ ಹಾಕೋ ಅವಶ್ಯಕತೆ ಇದೆ ಅಂತಾರೆ..! ಚಿಕಿತ್ಸೆಯ ವೆಚ್ಚ 47 ಸಾವಿರ ಆಗುತ್ತೆಂದೂ ವೈದ್ಯರು ಹೇಳ್ತಾರೆ..! ಕೋಲ್ಕತ್ತದಿಂದ ಬಂದ ರೋಗಿಯ ಮಗನ ಬಳಿ ಇದ್ದಿದ್ದು ಕೇವಲ 15 ಸಾವಿರ ಮಾತ್ರ..! ಈ ವಿಷಯವನ್ನು ತಿಳಿದ ಆಟೋಡ್ರೈವರ್ ರವಿಚಂದ್ರನ್ ತನ್ನ ಆಟೋವನ್ನೇ ಅಡವಿಟ್ಟು ಚಿಕಿತ್ಸೆಗೆ ಹಣ ಹೊಂದಿಸಿಕೊಡ್ತಾರೆ..! ಹೀಗೆ ಎಲ್ಲಿಂದಲೂ ಬಂದ ವ್ಯಕ್ತಿಯ ಜೀವಕ್ಕಾಗಿ ಆಟೋ ಒತ್ತೆಯಾಗಿಟ್ಟು ಹಣ ಹೊಂದಿಸಿದ ರವಿಚಂದ್ರನ್ ನಿಜಕ್ಕೂ ಗ್ರೇಟ್..! ಎಲ್ಲಾ ಆಟೋ ಡ್ರೈವರ್ ಗಳೂ ಹೀಗೆ ಮಾನವೀಯತೆಯಿಂದ ನಡೆದು ಕೊಂಡರೆ, ಜನ ತುಂಬಾ ಆಪ್ತವಾಗಿ ಆಟೋದಲ್ಲಿ ಪ್ರಯಾಣಿಸ್ತಾರೆ ಅಲ್ವೇ..?! ಆದರೆ ಇವತ್ತು ಎಷ್ಟು ಜನ ಹೀಗಿದ್ದಾರೆ..?! ತನ್ನ ಆಟೋ ಅಡವಿಟ್ಟು ಪ್ರಯಾಣಿಕನ ಜೀವ ಉಳಿಸಿದ ದೇವರ ಬಗ್ಗೆ ನೀವೇನ್ ಹೇಳ್ತೀರಾ..?! ಕಮೆಂಟ್ ವಿಭಾಗ ನಿಮ್ಮ ಶುಭ ಸಂದೇಶಗಳಿಗಾಗಿ, ಅಭಿಪ್ರಾಯಕ್ಕಾಗಿ ಕಾದಿದೆ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?
ಇದೊಂದು ಸ್ಪೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!