ಧೋನಿ ಸೇರಿದಂತೆ ವಿಶ್ವದ ಈ 5 ಕ್ರಿಕೆಟಿಗರಿಗೆ ಇದೇ ಕೊನೆ ವಿಶ್ವಕಪ್..!!
ಹೌದು ಮುಂದೆ ಶುರುವಾಗಲಿರುವ ಏಕದಿನ ವಿಶ್ವಕಪ್ ಬಳಿಕ ದಶಕಗಳಿಂದ ತಮ್ಮ ತಮ್ಮತಂಡಕ್ಕೆ ಸೇವೆ ಸಲ್ಲಿಸಿದ ಕ್ರಿಕೆಟ್ ದಿಗ್ಗಜರು ನಿವೃತ್ತಿ ಘೋಷಿಸಲ್ಲಿದ್ದಾರೆ.. ಈ ಬಗ್ಗೆ ಧೋನಿ ಸ್ಪಷ್ಟನೆ ನೀಡದಿದ್ರು, ಮುಂಬರಲಿರುವ ಏಕದಿನ ವಿಶ್ವಕಪ್ ಬಳಿಕ ಧೋನಿ ನಿವೃತ್ತಿಯಾಗಲ್ಲಿದ್ದಾರೆ ಎನ್ನಲಾಗ್ತಿದೆ.. ಆದರೆ ಧೋನಿ ಫಿಟ್ನೆಸ್ ನೋಡಿದ್ರೆ ಅಭಿಮಾನಿಗಳು ಎಂಎಸ್ ಡಿ ಆಡಬೇಕು ಅಂತಿದ್ದಾರೆ…
ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಕೆಟ್ ಸ್ಟಾರ್ ಕ್ರಿಸ್ ಗೇಲ್ ಈಗಾಗ್ಲೇ ಈ ವಿಶ್ವಕಪ್ ಬಳಿಕ ತಮ್ಮ ನಿವೃತ್ತಿ ಅಂದು ಬಿಟ್ಟಿದ್ದಾರೆ.. ನನಗೆ ನನ್ನ ಕುಟುಂಬವಿದ್ದು, ಅವರೊಂದಿಗೆ ಕಾಲ ಕಳೆಯಬೇಕಿದೆ.. ಹೀಗಾಗೆ ಈ ಬಾರಿಯ ವರ್ಲ್ಡ್ ಕಪ್ ಮುಗಿಯುತ್ತಿದ್ದ ಹಾಗೆ ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ.
ಪಾಕಿಸ್ತಾನ ಕಂಡ ಶ್ರೇಷ್ಠ ಕ್ರಿಕೆಟಿಗ ಶೋಯಬ್ ಮಲ್ಲಿಕ್, ಶ್ರೀಲಂಕಾ ತಂಡದ ಲಸೀತ್ ಮಾಲಿಂಗ ಹಾಗು ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೈನ್ ಗೆ ಸಹ ಇದೇ ಕೊನೆ ವಿಶ್ವಕಪ್ ಆಗಿದ್ದು, ಇದೇ ಇವರ ಕೊನೆಯ ಏಕದಿನ ಸರಣಿಯಾಗಲಿದೆ.. ಆನಂತರ ಈ ಎಲ್ಲರು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲ್ಲಿದ್ದಾರೆ..