ಫೆ.24ಕ್ಕೆ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಭಾರೀ ಜಲಪ್ರವಾಹ ಸಾಧ್ಯತೆ.!
ಹೌದು, ಕರ್ನಾಟಕ ಸೇರಿದಂತೆ ಕರಾವಳಿ ಪ್ರದೇಶಗಳಿರುವ ರಾಜ್ಯಗಳಲ್ಲಿ ಜಲಪ್ರವಾಹ ಉಂಟಾಗುವ ಬಗ್ಗೆ ಹವಮಾನ ಇಲಾಖೆ ಮಾಹಿತಿ ನೀಡಿದೆ.. ಚಂದ್ರ ಭೂಮಿಗೆ ಅತ್ಯಂತ ಸಮೀಪ ಬರುತ್ತಿರುವ ಹಿನ್ನಲೆಯಲ್ಲಿ ಸಮುದ್ರಗಳ ಮೇಲೆ ನೈಸರ್ಗಿಕವಾಗಿ ಚಂದ್ರನ ಪ್ರಭಾವ ಹೆಚ್ಚಾಗಿರಲಿದೆ.. ಹೀಗಾಗೆ ಸಮುದ್ರ ಅಲೆಗಳು ದಡಕ್ಕೆ ರಬಸ ಹಾಗು ಎತ್ತರದಲ್ಲಿ ಬೀಸಿ ಬರಲಿವೆ…
ಇದರಿಂದ ಸಮುದ್ರ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಸಮಯದಲ್ಲಿ ಮೀನುಗಾರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗುವುದು.. ಹವಮಾನ ಇಲಾಖೆಯ ಮಾಹಿತಿ ಪ್ರಕಾರ ಫೆ.24ರೊಳಗೆ ಇಂತಹದೊಂದು ಬೆಳವಣಿಗೆ ನಡೆಯಲಿದೆಯಂತೆ.. ರಾತ್ರಿ ಒಂದು ಗಂಟೆಯ ಸಮಯದಲ್ಲಿ ಸಮುದ್ರದ ಅಲೆಗಳು ಜೋರಾಗುವ ಹಾಗು ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದ್ದು, ಈ ಬಗ್ಗೆ ಅಲ್ಲಿನ ಸ್ಥಳೀಯರು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವುದು ಒಳ್ಳೆಯದು..