ಬಂಡೀಪುರದಲ್ಲಿ ಮುಖ ಪ್ರಾಣಿಗಳ ಮರಣ ಮೃದಂಗ.. ಬೆಂಕಿಯ ಕೆನ್ನಾಲಿಗೆಗೆ ವನ್ಯ ಸಂಪತ್ತು ನಾಶ..
ಕಳೆದ ನಾಲ್ಕು ದಿನಗಳಿಂದ ಅಗ್ನಿಯ ರುದ್ರ ನರ್ತನ ಬಂಡೀಪುರದ ಅರಣ್ಯದ ಮೇಲೆ ನಡೆಯುತ್ತಿದೆ.. ಇದೇ ಮೊದಲ ಬಾರಿಗೆ ಘೋರ ಕಾಡ್ಗಿಚ್ಚಿಗೆ ಇಡೀ ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ.. ನೋಡು ನೋಡುತ್ತಿದ್ದ ಹಾಗೆ ಸಾವಿರಾರು ಹೆಕ್ಟೇರ್ ಕಾಡು ಬೆಂಕಿಯಲ್ಲಿ ಬೆಂದು ಬೂದಿಯಾಗಿದೆ.. ಇಡೀ ಕಾಡ್ಗಿಚ್ಚಿನ ತೀರ್ವತೆ ಹೇಗಿತ್ತು, ಇದರಲ್ಲಿ ವನ್ಯ ಜೀವನಗಳು ತಮ್ಮ ಪ್ರಾಣವನ್ನ ಉಳಿಸಿಕೊಳ್ಳಲಾಗದೆ ಸುಟ್ಟು ಕರಕಲಾದ ಚಿತ್ರಗಳು, ಎಂತಹ ಕಲ್ಲು ಹೃದಯವನ್ನ ಕರಗಿಸುತ್ತಿದೆ.. ಅದರಲ್ಲು ಅಪರೂಪದ ಜೀವ ಪ್ರಭೇದಗಳ ಅವಾಸಸ್ಥಾನವಾಗಿರುವ ಗೋಪಾಲಸ್ವಾಮಿ ಬೆಟ್ಟದ ಪ್ರದೇಶ ಸ್ಮಶಾನದಂತಾಗಿಬಿಟ್ಟಿದೆ..
TO