ಇಂದು ಭಾರತೀಯರಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.. ನಮ್ಮ ವಿರುದ್ಧವೇ ಪಿತೂರಿ ನಡೆಸಿ, ನಮ್ಮ 40 ಜನ ಯೋಧರನ್ನ ಹತ್ಯೆಗೈದ ಪಾಕ್ ಉಗ್ರರನ್ನ ಬಲಿ ಪಡೆಯುವ ಮೂಲಕ ನಮ್ಮ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ನೀಡಿದೆ.. ಇಂದು ಬೆಳಗ್ಗಿನ ಸಮಯ 3.30ರ ಸುಮಾರಿಗೆ ಈ ದಾಳಿ ನಡೆಸಿದ್ದು, ಕೇವಲ 90 ಸೆಕೆಂಡ್ ನಲ್ಲಿ ಉಗ್ರರ ತರಬೇತಿ ಸ್ಥಳವನ್ನ ಧ್ವಂಸ ಮಾಡಿ ವಾಪಸ್ ಆಗಿದೆ..
ದಟ್ಟ ಕಾಡಿನ ನಡುವೆ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.. ಖಚಿತ ಮಾಹಿತಿ ಕಲೆ ಹಾಕಿ ಮಿರಾಜ್ 2000 ಯುದ್ಧ ವಿಮಾನವನ್ನ ಬಳಸಿ 1000 ಕೆಜಿಯಷ್ಟು ಬಾಂಬ್ ಅನ್ನ ಉಗ್ರರ ತಂಗುದಾಣದ ಮೇಲೆ ಹಾಕಲಾಗಿದೆ.. ಇದರಲ್ಲಿ ಸುಮಾರು 300 ಕ್ಕೂ ಹೆಚ್ಚು ಉಗ್ರರು ಬಲಿಯಾಗಿರುವ ಸಾಧ್ಯತೆಗಳಿದ್ದು, ಪಾಕ್ ಉಗ್ರರಿಗೆ ಎಚ್ಚರಿಕೆಯನ್ನ ನೀಡಿದೆ ನಮ್ಮ ಸೇನೆ