ಬೆಂಗಳೂರಿನಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ ಎಂದೇ ಹೇಳಬಹುದು ,
ಶೇಷಾದ್ರಿಪುರ ಠಾಣೆ ವ್ಯಾಪ್ತಿಯ ಆರ್.ಪಿ. ರಸ್ತೆಯ ಬಿಡಿಎ ಕಚೇರಿ ಬಳಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಆರೋಪಿಗಳು ನಿಂತುಕೊಂಡಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ದಾಳಿ ನಡೆಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ . ಒಬ್ಬಾತ ಪರಾರಿಯಾದ’ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಈ ಗ್ಯಾಂಗ್ ಕುಖ್ಯಾತ ರೌಡಿ ಭರತ ಅಲಿಯಾಸ್ ಸ್ಲಂ ಭರತ್ ಎಂಬುವನ ಸಹಚರರು ಎಂದು ಹೇಳಲಾಗಿದೆ . ಇಸ್ಲಾಂ ಭರತ್ ಗೆ ಇತೀಚೆಗಷ್ಟೇ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದರು,
ತನ್ನ ವಿರುದ್ಧ ಸಾಕ್ಷಿ ಹೇಳಿದ್ದವರಿಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಕುಖ್ಯಾತ ರೌಡಿ ಭರತ ಅಲಿಯಾಸ್ ಸ್ಲಂ ಭರತನನ್ನು ಇತ್ತೀಚೆಗಷ್ಟೇ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿತ್ತು.
ನಿತೇಶ್ ,ನಿತ್ಯನಂದ್, ಪೃಥ್ವಿರಾಜ್, ಮಧುಸೂದನ್, ಈ ನಾಲ್ವರ ಬಳಿಯೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಸ್ಲಂ ಭರತನೇ ನಮಗೆ ಸ್ಕೆಚ್ ಹಾಕಿ ಕೊಲೆ ಮಾಡಲು ಹೇಳಿದ್ದ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ . ಆ ನಟನ ಚಲನವಲನಗಳನ್ನು ಗಮನಿಸಿ ಅಟ್ಯಾಕ್ ಮಾಡಲು ಸಿದ್ದರಾಗಿದ್ದ ಈ ಗ್ಯಾಂಗ್ ನನ್ನು ಪೋಲಿಸರು ಸೆರೆಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಭರತ್ ಜೈಲಿನಲ್ಲಿದ್ದಾನೆ ಇನ್ನೂ ವಿಚಾರಣೆ ಬಾಕಿ ಇದೆ ಅಲ್ಲಿಯವರೆಗೂ ಆ ಸ್ಟಾರ್ ನಟನ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ .