ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ಪ್ರಶಾಂತ್ ನನ್ನ ಹಿಂದೆ ಬಿದ್ದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ದೃಶ್ಯ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಮಾದ್ಯಮದವರೊಂದಿಗೆ ಮಾತನಾಡಿರುವ ದೃಶ್ಯ ನಾನು ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಫೋಟೋಶೂಟ್ ಮಾಡಿಸುವಾಗ ಪ್ರಶಾಂತ್ ಪರಿಚಯವಾಗಿದ್ದನು. ಪರಿಚಯವಾಗಿ ಸ್ನೇಹವಾಗಿ ಇಬ್ಬರು ಎರಡು ತಿಂಗಳ ಲಿವಿಂಗ್ ರಿಲೇಷನ್ ಶಿಪ್‍ನಲ್ಲಿದ್ವಿ ಅಷ್ಟೆ. ದಿನ ಕಳೆದಂತೆ ಪ್ರಶಾಂತ್ ಅನೇಕ ಹುಡುಗಿಯರಿಗೆ ಮೋಸ ಮಾಡಿರುವುದು,
ಚಾಟ್ ಮಾಡುತ್ತಿದ್ದ ವಿಚಾರ ನನಗೆ ತಿಳಿಯಿತು. ಜೊತೆಗೆ ಹುಡುಗಿಯರ ಅಶ್ಲೀಲ ಫೋಟೋವನ್ನು ಕಲೆಕ್ಟ್ ಮಾಡಿಕೊಳ್ಳುತ್ತಿದ್ದ. ನನಗೆ ಗೊತ್ತಿಲ್ಲದೇ ನನ್ನ ಅಶ್ಲೀಲ ಫೋಟೋವನ್ನು ಕಲೆಕ್ಟ್ ಮಾಡಿಕೊಂಡಿದ್ದನು. ಈ ವಿಚಾರ ನನಗೆ ಗೊತ್ತಾದ ಮೇಲೆ ಈ ಬಗ್ಗೆ ಆತನ ಬಳಿ ಮಾತನಾಡಿದೆ. ಆದರೆ ಪ್ರಶಾಂತ್ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದನು. ಕೊನೆಗೆ ಬಲವಂತವಾಗಿ ಫೆಬ್ರವರಿ 24 ರಂದು ನನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡನು ಎಂದು ಹೇಳುವ ಮೂಲಕ ಹೊಸ ಬಾಂಬ್ ವೊಂದನ್ನ ಸಿಡಿಸಿದ್ದಾರೆ.
ಇದರ ಬೆನ್ನಿಗೆ ಮತ್ತಷ್ಟು ವಿಷಯಗಳನ್ನು ಹಂಚಿಕೊಂಡಿರುವ ದೃಶ್ಯ ನಿಶ್ಚಿತಾರ್ಥವಾದ ಬಳಿಕ ಈಗಾಗಲೇ ಪ್ರಶಾಂತ್‍ಗೆ ಮದುವೆ ಕೂಡಾ ಆಗಿರುವ ವಿಚಾರ ತಿಳಿಯಿತು. ನಂತರ ಈತನಿಂದ ದೂರವಾಗಿ ಕುಶಾಲನಗರದಲ್ಲಿ ನನ್ನ ಮನೆಯಲ್ಲಿ ವಾಸವಾಗಿದ್ದೆ. ಅಲ್ಲಿಗೂ ಬಂದು ನನ್ನ ಮೇಲೆ ಹಾಗೂ ನನ್ನ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ.
ಪ್ರಶಾಂತ್ ಅನೇಕ ಹುಡುಗಿಯರ ಜೊತೆ ಸುತ್ತಾಡಿರುವ ಫೋಟೋಗಳು ನನ್ನ ಬಳಿ ಇವೆ. ಕೊನೆಗೆ ಈ ಬಗ್ಗೆ ನಾನು ಕುಶಾಲನಗರದಲ್ಲಿ ಪೊಲೀಸರಿಗೆ ದೂರು ಕೂಡ ನೀಡಿದ್ದೆ. ನಾನು ದೂರು ನೀಡಿದ ಬಳಿಕ ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಪೊಲೀಸರು ಈ ಬಗ್ಗೆ ವಿಚಾರಣೆ ಮಾಡಿದ್ದರು ಬಳಿಕ ಆಗ ಮತ್ತೆ ನನ್ನ ಸಹವಾಸಕ್ಕೆ ಬರಲ್ಲ ಎಂದು ಲಿಖಿತ ರೂಪದಲ್ಲಿ ಪ್ರಶಾಂತ್ ಬರೆದು ಕೊಟ್ಟಿದ್ದಾನೆ ಎಂದು ವಿವರಿಸಿದ್ದಾರೆ.
ನಾನು ಮೊದಲು ಬೆಂಗಳೂರಿನ ಸಂಜಯ್ ನಗರದಲ್ಲಿದ್ದೆ. ಆಗ ಪ್ರಶಾಂತ್ ನಾನು ಮನೆ ಮಾಡಿಕೊಡುತ್ತೇನೆ, ನನ್ನ ಒಟ್ಟಿಗೆ ಇರಬೇಕು ಎಂದು ಬ್ರಿಗೇಡ್ ಬಳಿ ಮನೆ ಮಾಡಿಕೊಟ್ಟಿದ್ದನು.
ನಾನು ಅಲ್ಲೇ ಇದ್ದೆ, ಮನೆಗೆ ಪ್ರಶಾಂತ್ ಆಗಾಗ ಬಂದು ಹೋಗುತ್ತಿದ್ದನು. ಒಂದುವರೆ ತಿಂಗಳು ಮಾತ್ರ ನಾವಿಬ್ಬರು ಲಿವಿಂಗ್ ಟುಗೆಟರ್ ನಲ್ಲಿದ್ವಿ. ಈತ ಏನು ಎಂಬ ಬಗ್ಗೆ ತಿಳಿದ ಮೇಲೆ ನಾನು ಬೇರೆ ಮನೆಗೆ ಶಿಫ್ಟ್ ಆಗಿದ್ದೇನೆ.
ಆತನಿಂದ ನನಗೆ ಜೀವ ಬೆದರಿಕೆ ಇತ್ತು. ಹೀಗಾಗಿ ನಾನು ದೂರು ಕೊಡಲು ಮುಂದಾಗಿಲ್ಲ. ನೀನು ದೂರುಕೊಟ್ಟರು ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ಈಗ ನೀನು ದೂರು ಕೊಟ್ಟರು ಏನು ಪ್ರಯೋಜನವಿಲ್ಲ ಎಂದು ಆತ ಈ ನನಗೆ ಬೆದರಿಕೆಯನ್ನು ಹಾಕಿದ್ದ ಎಂದು ದೃಶ್ಯ ವಿವರಣೆಯನ್ನು ನೀಡಿದ್ದಾರೆ.