ಮೋದಿಗೆ ತಯಾರಾಯ್ತು ರತ್ನ ಖಚಿತ ಕಿರೀಟ..! ಆದ್ರೆ ಮೋದಿ ಇದನ್ನು ಧರಿಸುವುದಾದ್ರು ಹೇಗೆ ಅಂತೀರಾ..?

Date:

ನಾವು ಗಮನಿಸಿರುವ ಹಾಗೆ ಇದುವರೆಗೂ ಕೋಡಿ ಮಥದ ಸ್ವಾಮಿಗಳು ನುಡಿದಿರುವ ಭವಿಷ್ಯ ಸುಳ್ಳಾಗಿರುವುದು ತೀರಾ ಕಡಿಮೆ, ಇದೀಗ ಅಂತದ್ದೇ ಭವಿಷ್ಯವೊಂದನ್ನ ಶ್ರೀಗಳು ನುಡಿದಿದ್ದಾರೆ, ಲೋಕಸಭಾ ಚುನಾವಣೆಗೂ ಮುನ್ನ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಯಾದಗಿರಿಯಲ್ಲಿ ಲೋಕಸಭೆ ಚುನಾವಣೆಗೆ ಸಂಭಂದ ಪಟ್ಟಂತೆ ಭವಿಷ್ಯವನ್ನು ನುಡಿದಿದ್ದಾರೆ.

ಕರ್ನಾಟಕದಲ್ಲಿ ನಡೆದ ಕಳೆದ ವಿಧಾನಸಭೆ ಚುನಾವಣೆಯ ವೇಳೆಯೂ ಎರಡು ಪ್ರಮುಖ ಪಕ್ಷಗಳಿಗೆ ಹಿನ್ನಡೆಯಾಗಿ, ಅನಿರೀಕ್ಷಿತ ವ್ಯಕ್ತಿ ಅರಸನಾಗಲಿದ್ದಾನೆ ಎಂದು ಕೋಡಿಶ್ರೀಗಳು ನುಡಿದಿದ್ದನ್ನು ನಾವಿಲ್ಲಿ ಸ್ಮರಿರಬಹುದು ಆ ಅನಿರೀಕ್ಷಿತ ವ್ಯಕ್ತಿ ಎಂದರೆ ಅದು ಕುಮಾರಸ್ವಾಮಿ ಎಂದೇ ವ್ಯಾಖ್ಯಾನಿಸಲಾಗಿತ್ತು ಎಂಬುದು ಇದೀಗ ಇತಿಹಾಸ.
ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು,

ಹೋದ ವರ್ಷ ಚಂದ್ರಗ್ರಹಣದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಏರುಪೇರಾಗಲಿದೆ ಎಂದು ಹೇಳಿದ್ದರು. ಇದರ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ದೊಂಬರಾಟವನ್ನು ನಾವು ಸೂಕ್ಷಮವಾಗಿ ಗಮನಿಸಿದ್ದೇ ಆದರೆ ಬಿಜೆಪಿ ಸತತವಾಗಿ ಆಪರೇಶನ್ ಕಮಲದ ಮೂಲಕ ಕುಮಾರಸ್ವಾಮಿ ಸರಕಾರವನ್ನು ಕೆಡವಲು ಪ್ರಯತ್ನಿಸಿದ್ದರೂ ಸಹ ಅದು ವಿಫಲವಾಗಿತ್ತು.
ಈ ಹಿಂದೆ ಇಷ್ಟೆಲ್ಲ ನಿಖರವಾಗಿ ಭವುಷ್ಯವನ್ನು ನುಡಿದಿರುವ ಸ್ವಾಮೀಜಿಯವರು ಯಾದಗಿರಿಯಲ್ಲಿ ನುಡಿದ ಭವಿಷ್ಯ, ಪರೋಕ್ಷವಾಗಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದೆ ಎನ್ನುವುದು ಇದೀಗ ಸ್ಪಷ್ಟವಾಗಿದೆ.
ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಕೋಡಿ ಮಠದ ಶ್ರೀಗಳು ಮಾತನಾಡುತ್ತಿದ್ದ ವೇಳೆ “ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ” ಎನ್ನುವ ಭವಿಷ್ಯವನ್ನು ಕೋಡಿಶ್ರೀಗಳು ನುಡಿದಿದ್ದಾರೆ.


ರತ್ನಖಚಿತ ಸುವರ್ಣ ಕಿರೀಟ ಎನ್ನುವುದು ಪ್ರಧಾನಮಂತ್ರಿ ಹುದ್ದೆ, ಸ್ಥಿರವಾಗಿರುತ್ತದೆ ಎಂದರೆ, ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯವನ್ನು ವ್ಯಾಖ್ಯಾನಿಸಲಾಗುತ್ತಿದೆ. ಹಾರನಹಳ್ಳಿಯ ಕೋಡಿಮಠದ ಶ್ರೀಗಳ ಒಗಟಿನ ರೂಪದಲ್ಲಿ ನುಡಿದ ಈ ಭವಿಷ್ಯವನ್ನು ಹೀಗೆ ಅರ್ಥೈಸಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ನಾವು ಇಲ್ಲಿನ ತನಕ ಗಮನಿಸಿದ್ದೇ ಆದರೆ ಕೋಡಿ ಶ್ರೀಗಳ ಭವಿಷ್ಯ ಸುಳ್ಳಾಗಿಲ್ಲ ಎಂಬುದಂತು ನಿಜ ಆದರೂ ಸಹ ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ಎಲ್ಲರೂ ಕಾದು ನೋಡಲೇ ಬೇಕು.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...