ಚಿತ್ರರಂಗದಲ್ಲಾಗಲಿ, ಕ್ರೀಡಾರಂಗದಲ್ಲಾಗಲಿ ನಿರ್ಮಾಣವಾಗುವ ದಾಖಲೆಗಳು ಯಾವುದೂ ಕೂಡಾ ಶಾಶ್ವತ ಅಲ್ಲ. ಇಂದು ನಿರ್ಮಾಣವಾದ ದಾಖಲೆ ನಾಳೆ ಅಳಿಸಿ ಹೊಗುತ್ತೆ. ನಾಳೆ ಸೃಷ್ಟಿಯಾದ ದಾಖಲೆ ನಾಡಿದ್ದು ಮಾಯವಾಗುತ್ತೆ.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ವರ್ಲ್ಡ ವೈಡ್ ಬಿಡುಗಡೆಯಾಗಿ, ಎಲ್ಲ ಕಡೆಯೂ ಉತ್ತಮ ಪ್ರದರ್ಶನವನ್ನು ಕಾಣ್ತಿದೆ. ಅದಕ್ಕೂ ಮುಂಚೆ ತೆರೆಕಂಡಿದ್ದ ಯಶ್ ಅಭಿನಯದ ಕೆಜಿಎಫ್ ಚಿತ್ರವೂ 75 ದಿನ ಪೂರೈಸಿ ಇನ್ನು ಹಲವು ಚಿತ್ರಮಂದಿಗಳಲ್ಲಿ ಇಂದಿಗೂ ಸಹ ಪ್ರದರ್ಶನವಾಗುತ್ತಲೇ ಇದೆ.
ಮೊದಲ ಬಾರಿಗೆ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಇದುವರೆಗೂ ಯಾರೂ ಮಾಡದಂತಹ ದಾಖಲೆಯನ್ನ ನಿರ್ಮಿಸಿತ್ತು. ಈ ರೆಕಾರ್ಡ್ ಬ್ರೇಕ್ ಮಾಡೋಕೆ ಸದ್ಯಕ್ಕಂತೂ ಆಗಲ್ಲ ಎಂಬ ಮಾತುಗಳು ಇಡೀ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿತ್ತು, ಇಂತಹ ಮಾತುಗಳು ಕೇಳಿಬರುತ್ತಿರುವಾಗಲೆ ಬಿರುಗಾಳಿಯಂತೆ ಎಂಟ್ರಿಕೊಟ್ಟಿದ್ದು ದರ್ಶನ್ ಅಭಿನಯದ ಯಜಮಾನ ಸಿನಿಮಾ. ಇದೀಗ ಇದರ ಪರಿಣಾಮದಿಂದಾಗಿ ಕೆಜಿಎಫ್ ರೆಕಾರ್ಡ್ ಬ್ರೇಕ್ ಆಗುವ ಎಲ್ಲ ಲಕ್ಷಣಗಳು ಎದ್ದು ಕಾಣ್ತಿದೆ ಅದು ಕೇವಲ ಕಲವೇ ಗಂಟೆಗಳಲ್ಲಿ.
ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ರಾಕಿಂಗ್ ಯಶ್ ಅವರ ಕೆಜಿಎಫ್ ಚಾಪ್ಟರ್ 1 ಟ್ರೈಲರ್. ಇದೀಗ,
ಈ ದಾಖಲೆಯನ್ನ ಮುರಿಯೋಕೆ ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಸಜ್ಜಾಗಿದ್ದು, ಎರಡು ಟ್ರೈಲರ್ ಗಳ ನಡುವೆ ಕೇವಲ 1,73,400 ಲಕ್ಷ ವ್ಯತ್ಯಾಸವಿದೆ. ನವೆಂಬರ್ 8 ರಂದು ಬಿಡುಗಡೆಯಾಗಿದ್ದ ಕೆಜಿಎಫ್ ಕನ್ನಡ ಟ್ರೈಲರ್ ಇಲ್ಲಿಯವರೆಗೂ 1,86,22,650 ಕೋಟಿ ವೀಕ್ಷಣೆ ಕಂಡಿದೆ. ಇದು ಕನ್ನಡ ಮಟ್ಟಿಗೆ ಮೊದಲ ಸ್ಥಾನದಲ್ಲಿದೆ.
ಇದುವರೆಗೂ ಟ್ರೈಲರ್ ವೀಕ್ಷಣೆಯಲ್ಲಿ ಕೆಜಿಎಫ್ ಮಟ್ಟಕ್ಕೆ ಯಾವ ಟ್ರೈಲರ್ ಕೂಡ ಯಶಸ್ಸು ಕಂಡಿರಲಿಲ್ಲ. ಕೆಜಿಎಫ್ ದಾಖಲೆ ಮುರಿಯಲು ಕಷ್ಟಸಾಧ್ಯ ಎಂದು ಲೆಕ್ಕಾಚಾರ ಹಾಕ್ತಿದ್ದ ವೇಳೆ ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಂದು ನೋಡು ನೋಡುತ್ತಿದ್ದಂತೆ ಕೆಜಿಎಫ್ ಸನಿಹಕ್ಕೆ ಇಂದು ಯಜಮಾನ ಬಂದು ನಿಂತಿದ್ದಾನೆ.
ಫೆಬ್ರವರಿ 9 ರಂದು ರಿಲೀಸ್ ಆಗಿದ್ದ ಯಜಮಾನ ಟ್ರೈಲರ್, ಇಲ್ಲಿಯವರೆಗೂ 11,84,49,166 ಕೋಟಿ ವೀಕ್ಷಣೆ ಕಂಡಿದೆ. ಒಂದು ವೇಳೆ ಯಜಮಾನ ಸಿನಿಮಾ ಈ ದಾಖಲೆಯನ್ನ ಬ್ರೇಕ್ ಮಾಡಿದ್ರು ಅದು ಕೂಡಾ ಶಾಶ್ವತವಲ್ಲ. ಆ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ಟ್ರೈಲರ್ ಬರಬಹುದು. ಒಟ್ಟಾರೆಯಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗದ ಚಿತ್ರಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದ್ದು ಇದು ಹೀಗೆ ಮುಂದುವರೆದು ಕನ್ನಡ ಚಿತ್ರಗಳ ಕೀರ್ತಿ ಎಲ್ಲೆಡೆ ಪಸರಿಸುವಂತಾಗಲಿ ಎಂಬುದೇ ನಮ್ಮ ಆಶಯ.