ಮೊಮ್ಮಗನ ವಿರುದ್ಧ ಆಯ್ತು ಈಗ ದೇವೇಗೌಡರ ವಿರುದ್ಧವೇ ಗೋ ಬ್ಯಾಕ್ ಕ್ಯಾಂಪೇನ್..!

Date:

ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಹೆಚ್ಚುತ್ತಿದೆ.‌ ಎಲೆಕ್ಷನ್ ಡೇಟ್ ಅನೌನ್ಸ್ ಆದ ಮೇಲೆ ಟಿಕೆಟ್ ಕಸರತ್ತು ಜೋರಾಗಿ ನಡೆಯುತ್ತಿದೆ. ಈ ನಡುವೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧವೇ ಗೋ ಬ್ಯಾಕ್ ಕ್ಯಾಂಪೇನ್ ಶುರುವಾಗಿದೆ.
ಮಂಡ್ಯದಲ್ಲಿ ದೇವೇಗೌಡರ ಮೊಮ್ಮಗ , ಮುಖ್ಯಮಂತ್ರಿ ಹೆಚ್ .ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆದ ಗೋ ಬ್ಯಾಕ್ ನಿಖಿಲ್ ಅಭಿಯಾನ ಗೊತ್ತೇ ಇದೆ.‌ ಮಂಡ್ಯದ ಒಂದಿಷ್ಟು ಮಂದಿ ಸುಮಲತಾ ಅವರಿಗೆ ಸಪೋರ್ಟ್ ಮಾಡಿ ನಿಖಿಲ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈಗ ದೇವೇಗೌಡರ ವಿರುದ್ಧವೇ ಅಭಿಯಾನ ಶುರುವಾಗಿದೆ.
ತುಮಕೂರಿನಲ್ಲಿ ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬ ಮಾತಿದೆ. ಆದರೆ, ತುಮಕೂರು ಮಂದಿ ಸಂಸದ ಮುದ್ದಹನುಮೇಗೌಡರಿಗೇ ಟಿಕೆಟ್ ಕೊಡಿ…ದೇವೇಗೌಡರು ತುಮಕೂರಿಗೆ ಬಂದು ನಿಲ್ಲೋದು‌ ಬೇಡ ಅಂತ ಒತ್ತಾಯಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅಭಿಯಾನ ಜೋರಾಗಿದೆ.
ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೇ ಇದ್ದರೆ ಮುಂದೆ ಕಾಂಗ್ರೆಸ್ ಭಾರೀ ನಷ್ಟ ಅನುಭವಿಸಬೇಕಾಗುತ್ತೆ ಅಂತ ಎಸ್ ಪಿ‌ ಮುದ್ದಹನುಮೇಗೌಡರ ಅಭಿಮಾನಿಗಳು ಎಚ್ಚರಿಕೆ ಕೂಡ ನಡೆದಿದ್ದಾರೆ.

Share post:

Subscribe

spot_imgspot_img

Popular

More like this
Related

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ ದರ?

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ...

ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ?: ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ?: ಸಿದ್ದರಾಮಯ್ಯ...

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು:...

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...