No menu items!
14.8 C
Munich
Tuesday, June 16, 2026

ಲೋಕಸಭಾ ಎಲೆಕ್ಷನ್ ಹಿನ್ನೆಲೆ ಖಾಸಗಿ ಬಸ್ ದರ ಹೆಚ್ಚಳ

Must read

ಎಲೆಕ್ಷನ್ ಕಮೀಷನ್ ಲೋಕಸಭೇ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕಸರತ್ತು ಆರಂಭವಾಗಿದೆ. ಈಗ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಇತ್ತ ಖಾಸಗಿ ಬಸ್ ಗಳು ಟಿಕೆಟ್ ದರ ಹೆಚ್ಚಿಸಿದೆ. ಹೌದು ಬೆಂಗಳೂರಿನಿಂದ ಉಡುಪಿ, ಕುಂದಾಪುರ, ಮಂಗಳೂರಿಗೆ ತೆರಳುವ ಹಾಗೂ ಬೆಂಗಳೂರಿನಿಂದ ಕರಾವಳಿ ಕಡೆ ಹೋಗುವ ಖಾಸಗಿ ಬಸ್ ನಲ್ಲಿ ದರ ಏರಿಕೆ ಮಾಡಲಾಗಿದೆ.

ಹೌದು, ಟಿಕೆಟ್ ದರವನ್ನು ಶೇ.30ರಿಂದ 50 ರಷ್ಟು ಏರಿಕೆ ಮಾಡಲಾಗಿದೆ. ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ ಬಳಿಕ ಮತದಾನ ಮಾಡಲು ಊರುಗಳಿಗೆ ಹೊರಡುವವರ ಜೇಬಿಗೆ ಕತ್ತರಿ ಹಾಕಿದೆ. ಆನ್ ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಹೊರಟಾಗ ಬಸ್ ದರ ಏರಿಕೆಯಾಗಿರುವುದು ಬೆಳಕಿಗೆ ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article