ಸುಮಲತಾ ವಿಷಯದ ಬಗ್ಗೆ ಕ್ಯಾಮೆರಾ ಇಲ್ಲದೆ ಪತ್ರಕರ್ತರು ಮುತ್ತಿಕೊಂಡಾಗ ಮನಸ್ಸು ಬಿಚ್ಚಿ ಮಾತನಾಡಿದ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಯಾರೂ ಕೂಡ ತಲೆಹಾಕದೆ ನನಗೆ ಒಬ್ಬನಿಗೇ ಬಿಟ್ಟರೆ ಆರಾಮಾಗಿ ನಿಖಿಲ್‌ನನ್ನು ಗೆಲ್ಲಿಸುತ್ತೇನೆ.
ಆದರೆ ನಮ್ಮ ರೇವಣ್ಣ, ತಮ್ಮಣ್ಣ ಇಂಥ ಹೇಳಿಕೆ ಕೊಡಬಾರದು ಎಂದು ತಲೆ ಚಚ್ಚಿಕೊಂಡರು.
ಆಗ ಒಬ್ಬ ಪತ್ರಕರ್ತ, ‘ಕರ್ನಾಟಕ ಭವನದ ಪೂಜೆ ಮಾಡಲು ನೀವು ರೇವಣ್ಣನನ್ನು ಮುಂದೆ ಕಳಿಸಿದ್ರಿ. ಅವರು ನೋಡಿದ್ರೆ ಟೀವಿಯಲ್ಲಿ ಪ್ರಸಾದ ಹಂಚಿಯೇ ಬಿಟ್ಟಿದ್ದಾರೆ’ ಎಂದಾಗ ರೇವಣ್ಣ ಸಹಿತವಾಗಿ ಕುಮಾರಸ್ವಾಮಿ ಬಿದ್ದೂಬಿದ್ದು ನಕ್ಕರು.ಆಗ ರೇವಣ್ಣ, ‘ಅಯ್ಯೋ ಬಿಡಿ ಬ್ರದರ್, ಇಂಥದ್ದು ಮಾತನಾಡಲಿಲ್ಲ ಅಂದರೆ ನೀವೆಲ್ಲ ಪಬ್ಲಿಸಿಟಿ ಕೊಡುತ್ತೀರಾ? ಈಗ ಒಳ್ಳೆ ಪ್ರಚಾರ ಕೊಟ್ಟಿದ್ದೀರಿ’ ಎನ್ನುತ್ತಿದ್ದರು.
ನಂತರ ಕುಮಾರಸ್ವಾಮಿ ರೇವಣ್ಣ ಈ ರೀತಿ ಹೇಳಿಕೆಯನ್ನು ನೀಡಬಾರಾದಿತ್ತು ಎಂದು ಹೇಳಿ ಅಲ್ಲಿಗೆ ಮಾತು ನಿಲ್ಲಿಸದ ಕುಮಾರಸ್ವಾಮಿ,