ಈ ಲೇಖನ ಮಹಿಳೆಯರಿಗೆ ಮೀಸಲಾಗಿದೆ. ಮಾಸಿಕ ದಿನಗಳಲ್ಲಿ ಸೆಕ್ಸ್ ನಡೆಸುವುದು ಬಹುತೇಕ ಮಹಿಳೆಯರು ಅಪಾಯಕಾರಿ ಎಂದು ತಿಳಿದಿದ್ದಾರೆ. ಆದರೆ ವಿಜ್ಞಾನ ಇದು ಅಷ್ಟು ಅಪಾಯಕಾರಿಯಲ್ಲ ಎಂದು ಸೂಚಿಸುತ್ತದೆ. ಆದರೆ ಇತರ ದಿನಗಳಂತಲ್ಲದೇ ಈ ದಿನಗಳಲ್ಲಿ ಭಿನ್ನವಾದ ಅನುಭವವುಂಟಾಗಬಹುದು ಹಾಗೂ ಕೆಲವು ವಿಚಿತ್ರ ಸಂಗತಿಗಳೂ ಸಂಭವಿಸಬಹುದು.
ನಿಮ್ಮ ಮಾಸಿಕ ದಿನಗಳ ಸೆಡೆತ ಕಡಿಮೆಯಾಗಬಹುದು ಮಾಸಿಕ ದಿನಗಳಲ್ಲಿ ಎದುರಾಗುವ ನೋವು ಯಾರಿಗೂ ಇಷ್ಟವಾಗುವುದಿಲ್ಲ ಅಲ್ಲವೇ? ಆದರೆ ಸಂಸರ್ಗದ ಬಳಿಕ ಪಡೆಯುವ ಕಾಮಪರಾಕಾಷ್ಠೆಯ ಸಮಯದಲ್ಲಿ ಮೆದುಳಿನಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಗಳು (ಮೂಲತಃ ಇವು ಮನಸ್ಸಿಗೆ ಮುದನೀಡುವ ರಸದೂತಗಲಾಗಿವೆ) ದೇಹದ ಎಲ್ಲಾ ಭಾಗಗಳಲ್ಲಿ ಸಂತೃಪ್ತಿಯ ಭಾವವನ್ನು ಮೂಡಿಸುತ್ತದೆ. ಇದರಲ್ಲಿ ನೋವಿನಿಂದ ಕೂಡಿರುವ ಕೆಳಹೊಟ್ಟೆಯೂ ಸೇರಿದೆ. ಪರಿಣಾಮವಾಗಿ ಮಾಸಿಕ ದಿನಗಳ ನೋವು ಸಹಿಸಿಕೊಳ್ಳುವಷ್ಟು ಕಡಿಮೆಯಾಗುತ್ತದೆ.
ಈ ವಿದ್ಯಮಾನಕ್ಕೆ ಖಚಿತವಾದ ಕಾರಣವನ್ನು ಇದುವರೆಗೆ ವಿವರಿಸಲು ಸಾಧ್ಯವಾಗಿಲ್ಲ. ಆದರೆ ತಜ್ಞರ ಅಭಿಪ್ರಾಯದ ಪ್ರಕಾರ ಮಾಸಿಕ ದಿನಗಳ ಸಂಸರ್ಗದ ಮೂಲಕ ಪಡೆಯುವ ಕಾಮಪರಾಕಾಷ್ಠೆಯಿಂದ ಕೆಳಹೊಟ್ಟೆಯ ನೋವಿಗೆ ಕಾರಣವಾಗಿದ್ದ ಪ್ರೋಸ್ಟಾಗ್ಲಾಂಡಿನ್ಸ್ ಎಂಬ ರಾಸಾಯನಿಕಗಳು ಇಲ್ಲವಾಗಲು ಸಾಧ್ಯವಾಗುತ್ತದೆ.