ರಿಯಲ್ ಸ್ಟಾರ್ ಉಪೇಂದ್ರ ಕನ್ನಡದ ಜೊತೆ ಜೊತೆಗೆ ತೆಲುಗು ಇಂಡಸ್ಟ್ರಿಯಲ್ಲಿ ಬೆಳದವರು. ಉಪ್ಪಿಗೆ ಟಾಲಿವುಡ್ ಜೊತೆ ನಂಟಿದೆ. ಹಾಗಾಗಿ, ಉಪೇಂದ್ರ ಅವರನ್ನ ಹುಡುಕುತ್ತಾ ತೆಲುಗು ಮಂದಿ ಬರ್ತಾರೆ. ಅದ್ಯಾಕೋ ಇತ್ತೀಚೀನ ದಿನಗಳಲ್ಲಿ ಉಪೇಂದ್ರ ಅವರು ಯಾವ ಚಿತ್ರವನ್ನ ಒಪ್ಪಿಕೊಳ್ಳುತ್ತಿಲ್ಲ.
ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಸಿನಿಮಾದಲ್ಲಿ ಉಪೇಂದ್ರ ಅವರಿಗಾಗಿ ಒಂದು ಪಾತ್ರ ಮೀಸಲಿಟ್ಟು ಕೇಳಿದ್ರು. ಈಗಲೂ ಉಪ್ಪಿ ಒಪ್ಪಿಕೊಳ್ಳಲಿಲ್ಲ ಎನ್ನಲಾಗುತ್ತಿದೆ. ಸಿನಿಮಾದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ಉಪೇಂದ್ರ ಅವರು ಅಷ್ಟಾಗಿ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾತಿದೆ.
ಹಾಗಾಗಿಯೇ ಪರಭಾಷೆಯಲ್ಲಿ ಬಂದ ಆಫರ್ ನ್ನ ರಿಜೆಕ್ಟ್ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಅವರು ಸ್ಪರ್ಧೆ ಮಾಡುವುದು ಬಹುತೇಕ ಅನುಮಾನವಾಗಿದ್ದು, ಉಳಿದಂತೆ ಇತರೆ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವ ಪ್ರಯತ್ನ ಮಾಡುತ್ತಾರಂತೆ. ಸದ್ಯ ಆರ್ ಚಂದ್ರು ನಿರ್ದೇಶನ ಮತ್ತು ನಿರ್ಮಾಣದಲ್ಲಿ ಸಿದ್ಧವಾಗಿರುವ ಐ ಲವ್ ಯೂ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದಾರೆ.