ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಘೋಷಿಸಿದ್ದ ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರು ಮಂಡ್ಯದಲ್ಲಿ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಿಲ್ಲ..! ದೇವೇಗೌಡರ ಪರವಾಗಿ ಸಚಿವರಾದ ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ ಅವರು ಘೋಷಣೆ ಮಾಡಿದರು.
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರು ಘೋಷಿಸುವಾಗ ದೇವೇಗೌಡರು ಕಣ್ಣೀರಿಟ್ಟಿದ್ದರು. ಸಚಿವ ರೇವಣ್ಣ ಸಹ ಕಣ್ಣೀರಿಟ್ಟಿದ್ದರು. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರೂ ಭಾವುಕರಾಗಿದ್ದರು.
ದೇವೇಗೌಡರ ಫ್ಯಾಮಿಲಿಯ ಈ ಕಣ್ಣೀರಧಾರೆ ನಾನಾ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೋಲ್ ಆಗುತ್ತಿದೆ. ಡ್ರಾಮಾ ಅಂತ ಜನ ಕಾಲೆಳೆಯುತ್ತಿದ್ದಾರೆ. ಇದೇ ಕಾರಣದಿಂದ ದೇವೇಗೌಡರು ಇಂದು ನಿಖಿಲ್ ಅವರ ಹೆಸರನ್ನು ಘೋಷಿಸಿಲ್ಲ..!
ಪ್ರಜ್ವಲ್ ಹೆಸರು ಘೋಷಿಸಿದ್ದ ದೇವೇಗೌಡರು ನಿಖಿಲ್ ಅವರ ಹೆಸರನ್ನು ಘೋಷಿಸಲೇ ಇಲ್ಲ…!
Date: