16 ವರ್ಷದ ಬಾಲಕಿಯೊಬ್ಬಳ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಹವಮಾನ ಬದಲಾವಣೆಯ ಪರಿಹಾರೋಪಾಯದ ನಿಟ್ಟಿನಲ್ಲಿ ಶೀಘ್ರ ಕ್ರಮಕ್ಕೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡಿದ ಸ್ವೀಡನ್ ನ ಗ್ರೇಟಾ ಥನ್ಬರ್ಗ್ ಳ ಹೆಸರನ್ನು ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಹವಮಾನಕ್ಕಾಗಿ ಶಾಲೆ ಬಂದ್ ಎನ್ನುವ ಕ್ಯಾಂಪೇನ್ ಗೆ ನಾಂದಿ ಹಾಡಿದ ಗ್ರೇಟಾಳ ಹೆಸರನ್ನು ಸಂಸದರು ಶಿಫಾರಸು ಮಾಡಿದ್ದಾರೆ.
ಗ್ರೇಟಾ ಹವಾಮಾನಕ್ಕಾಗಿ ಸೈಕಲ್ ಮೂಲಕ ಕೈಗೊಂಡ ಅಭಿಯಾನಕ್ಕೆ 105ಕ್ಕೂ ಹೆಚ್ಚು ರಾಷ್ಟ್ರಗಳ ಬೆಂಬಲ ಸಿಕ್ಕಿದೆ. ಈ ರಾಷ್ಟ್ರಗಳ ಒಟ್ಟು 1659 ನಗರಗಳಲ್ಲಿ ಪ್ರತಿಭಟನೆ ನಡೆಯಲಿದು. ಲಕ್ಷಗಟ್ಟಲೆ ಯುವಕರು ಸೇರುವ ನಿರೀಕ್ಷೆ ಇದೆ. 2019 ರ ನೊಬೆಲ್ ಪುರಸ್ಕಾರಕ್ಕೆ ಒಟ್ಟು 223 ವ್ಯಕ್ತಿಗಳು ಮತ್ತು 78 ಸಂಸ್ಥೆಗಳನ್ನು ಶಿಫಾರಸು ಮಾಡಿದ್ದಾರೆ. ಡಿಸೆಂಬರ್ ನಲ್ಲಿ ಪ್ರಶಸ್ತಿ ಘೋಷಣೆಯಾಗುತ್ತದೆ.
16 ವರ್ಷದ ಪೋರಿಗೆ ಸಿಗುತ್ತಾ ನೊಬೆಲ್?
Date: