ಇಎಸ್ ಪಿ ಎನ್ ಪ್ರಕಟಿಸುವ ವಿಶ್ವದ ಅಂತ್ಯಂತ ಜನಪ್ರಿಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಟಾಪ್ 10 ನಲ್ಲಿರುವುದು ಕೇವಲ ಒಬ್ಬ ಕ್ರಿಕೆಟಿಗ ಮಾತ್ರ.
ಹೌದು, ವಿಶ್ವದ ಫೇಮಸ್ ಸ್ಪೋರ್ಟ್ಸ್ ಸ್ಟಾರ್ಸ್ ಪಟ್ಟಿಯಲ್ಲಿ ಮೊದಲ 10 ಸ್ಥಾನದಲ್ಲಿ ಸ್ಥಾನ ಪಡೆದ ಏಕಮಾತ್ರ ಕ್ರಿಕೆಟಿಗ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತ್ರ.

ಕೊಹ್ಲಿ 7 ನೇ ಸ್ಥಾನದಲ್ಲಿದ್ದು, ವಿಶ್ವದ ಒಬ್ಬರೇ ಒಬ್ಬ ಕ್ರಿಕೆಟಿಗರಾಗಿದ್ದಾರೆ.
ಎಫ್ ಸಿ ಬಾರ್ಸಿಲೋನಾ ತಂಡದ ನಾಯಕ ಲಿಯೋನಲ್ ಮೆಸ್ಸಿ, ಬಾಸ್ಕೆಟ್ ಬಾಲ್ ತಾರೆ ಲೆಬರಾನ್ ಜೇಮ್ಸ್, ಎಂಎಂಎ ಫೈಟರ್ ಕಾನರ್ ಮೆಕ್ ಗ್ರೆಗೋರ್ , ಟೆನ್ನಿಸ್ ತಾರೆ ರೋಜರ್ ಫೆಡರರ್ , ರಾಫೆಲ್ ನಾಡಲ್, ಗಾಲ್ಫರ್ ಟೈಗರ್ ವುಡ್ಸ್ ಅಗ್ರಸ್ಥಾನದಲ್ಲಿದ್ದಾರೆ.
ಅಗ್ರ 100ರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ 13ನೇ, ಯುವರಾಜ್ ಸಿಂಗ್ 18ನೇ, ಸುರೇಶ್ ರೈನಾ 22ನೇ, ಆರ್.ಅಶ್ವಿನ್ 42 ನೇ, ರೋಹಿತ್ ಶರ್ಮಾ46ನೇ, ಹರ್ಭಜನ್ ಸಿಂಗ್ 74ನೇ ಮತ್ತು ಶಿಖರ್ ಧವನ್ 94ನೇ ಸ್ಥಾನದಲ್ಲಿದ್ದಾರೆ. ಸಾನಿಯಾ ಮಿರ್ಜಾ ಅವರು 93ನೇ ಸ್ಥಾನದಲ್ಲಿದ್ದಾರೆ.