ಚುನಾವಣೆ ಕಾವು ಜೋರಾಗುತ್ತಿದೆ. ಚುನಾವಣೆ ಎಂದಾಗ ಎಣ್ಣೆ ನಶೆಯೂ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಆದ್ದರಿಂದ ಚುನಾವಣಾ ಆಯೋಗ ಎಣ್ಣೆ ಕಿಕ್ ಇಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬಾರನ್ನು ಬೆಳಕು ಬಿಡುವ ಮುನ್ನವೇ ಓಪನ್ ಮಾಡಂಗಿಲ್ಲ. ಬೆಳಗ್ಗೆ 10.30ರ ಬಳಿಕವೇ ತೆರಯಬೇಕು.
ನಿಗಧಿತ ಸಮಯಕ್ಕೇ ಮುಚ್ಚ ಬೇಕು. ತಡವಾಗಿ ಮುಚ್ಚಿದರೆ ದಂಡ.
ಒಬ್ಬ ವ್ಯಕ್ತಿ 2.5 ಲೀಟರ್ ಗಿಂತ ಜಾಸ್ತಿ ಮದ್ಯ ಖರೀದಿ ಮಾಡಬಾರದು. ಅಕಸ್ಮಾತ್ ಜಾಸ್ತಿ ಮದ್ಯ ಖರೀದಿ ಮಾಡಿದ್ರೆ ಬಾರ್ ಪರವಾನಿಗೆಗೆ ಕುತ್ತು.
ದಿನದ ವ್ಯಾಪಾರದ ವಿವರಗಳನ್ನು ಅಬಕಾರಿ ಇಲಾಖೆಗೆ ಕಳುಹಿಸಬೇಕು.
ಎಲ್ಲಾ ಬಾರ್ ಗಳ ಮೇಲೆ ಕಣ್ಣಿಡಲು ವಿಶೇಷ ತಂಡ ರಚನೆಯಾಗಿದ್ದು ಹೀಗೆ ಎಣ್ಣೆಗೂ ನೀತಿ ಸಂಹಿತೆ ತಂದಿದ್ದಾರೆ.