ಸದಾ ಬಿಜೆಪಿಯವರ ಮೇಲೆ ಮತ್ತು ಮೋದಿಯ ವಿರುದ್ಧ ತಮ್ಮ ಮಾತಿನ ಮೂಲಕ ದಾಳಿಯನ್ನು ನಡೆಸುತ್ತಲೇ ಇರುವ ಸಿದ್ಧರಾಮಯ್ಯ ನಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಮೇಲೆ 12-13 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆದರೆ, ನಾವು ಅದನ್ನು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ ಎಂದು ಹೇಳುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದುವರೆದು ಮಾತನಾಡಿದ ಮಾಜಿ ಸಿ ಎಂ ಬಿಜೆಪಿಯವರು ಒಂದೆರಡು ಸರ್ಜಿಕಲ್ ದಾಳಿ ನಡೆಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಟೀಕಿಸುವ ಮೂಲಕ ಬಿಜೆಪಿಯನ್ನು ಅಣುಕಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಡೆದ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಸೋತು ಶರಣಾಗಿದ್ದು ಗೊತ್ತಿಲ್ಲವೇ? ಅದಕ್ಕೆ ಕಾರಣ ಯಾರು ಅಂತ ಗೊತ್ತಿಲ್ಲವೇ ? ಬಿಜೆಪಿಯವರು ಮಾಡಿರುವ ಈ ಸರ್ಜಿಕಲ್ ಸ್ಟ್ರೈಕ್ ಆ ಯುದ್ಧಕ್ಕಿಂತಲು ದೊಡ್ಡದೇ? ಎಂದು ಪ್ರಶ್ನೆ ಮಾಡುವ ಮೂಲಕ ದೇಶದ ರಕ್ಷಣೆಯ ವಿಚಾರವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ರಾಜಕಾರಣಕ್ಕೆ ಬಳಸಿಕೊಂಡಿರಲಿಲ್ಲ. ಬಿಜೆಪಿಯವರು ಬರಿ ಸುಳ್ಳು ಹೇಳುತ್ತಿದ್ದಾರೆ.
ಎಲ್ಲವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ, ಮುಸ್ಲಿಂ ಪರ ಎಂದರು ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ಆದರೆ ನಾನು ಬಡವರು, ಮುಸ್ಲಿಮರು, ದಲಿತರು, ಹಿಂದುಳಿದವರ ಪರ ಇದ್ದೇನೆ ಎಂಬ ನಿಜ ರಾಜ್ಯದ ಜನತೆಗೆ ಗೊತ್ತಿದೆ. ಅಕ್ಕಿ, ಹಾಲಿಗೆ ಸಬ್ಸಿಡಿ, ಇಂದಿರಾ ಕ್ಯಾಂಟೀನ್ ಸ್ಥಾಪನೆ, ಸಾಲ ಮನ್ನಾ ಮಾಡಿದ್ದು ಎಲ್ಲಾ ವರ್ಗದ ಜನರಿಗಾಗಿ.
ಆದರೆ ಯಡಿಯೂರಪ್ಪ ಅವಧಿಯಲ್ಲಿ ಏನು ಮಾಡಿದರು? ಬರೀ ಜೈಲಿಗೆ ಹೋಗಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದು ಟೀಕಿಸಿದ್ರು.
ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರಷ್ಟು ಬೇರೆ ಯಾರೂ ಅಭಿವೃದ್ಧಿ ಮತ್ತು ಒಳ್ಳೆಯ ಕೆಲಸಗಳನ್ನು ಬೇರಾರು ಮಾಡಿಲ್ಲ. ಕೆಲವರು ನಾಲ್ಕೈದು ಬಾರಿ ಆಯ್ಕೆಯಾದರೂ ಕೆಲಸ ಮಾಡಿಲ್ಲ ಅದು ನನಗೆ ಗೊತ್ತಿದೆ ಎಂದು ಹರಿಹಾಯ್ದರು. ನಮಗೆ ರಾಮಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ. ನನ್ನ ಹೆಸರಿನಲ್ಲೂ ರಾಮ ಇದ್ದಾನೆ ರಾಮ ಬರೀ ಬಿಜೆಪಿಯ ಸ್ವತ್ತಲ್ಲ? ಆದರೆ, ಮಸೀದಿ ಒಡೆದು ಅಲ್ಲಿ ರಾಮಮಂದಿರ ಕಟ್ಟುವುದಕ್ಕೆ ನನ್ನ ವಿರೋಧವಿದೆ. ಆದರೆ ಬಿಜೆಪಿಯವರು ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿ. ರಾಮಮಂದಿರ, ಹಿಂದುತ್ವದ ಹೆಸರಿನಲ್ಲಿ ಜನರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.