ಮಾಧ್ಯಮಗಳು ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಆಗುವ ಸುದ್ದಿ ಪ್ರಸಾರ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ.
2010 ರಲ್ಲಿ ಖಾಸಗಿ ವಾಹಿನಿಯೊಂದು ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಾಹ ವಿಚ್ಚೇದನ ಪ್ರಕರಣದ ವರದಿ ಮಾಡಿದ್ದನ್ನು ನಿರ್ಬಂಧಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಮಾಧ್ಯಮ ಸ್ವಾತಂತ್ರ್ಯವಿದೆ. ಆದರೆ ಕಲೆವೊಮ್ಮೆ ಪತ್ರಕರ್ತರಿಗೆ ಸುದ್ದಿ ಅಥವಾ ಮಾಹಿತಿ ಎನಿಸಿದ್ದು, ವ್ಯಕ್ತಿಗಳಿಗೆ ತೀರಾ ಖಾಸಗಿತನ ಹಾಗೂ ಸೂಕ್ಷ್ಮ ಸಂಗತಿ ಆಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿಗಳ ಖಾಸಗಿತನ ನಡುವಿನ ಲಕ್ಷ್ಮಣ ರೇಖೆ ಸೂಕ್ಷ್ಮವಾಗಿದೆ ಎಂದು ಹೇಳಿದ್ದಾರೆ.