ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ.ಸಿ ಘೋಷ್ ಅವರು ಮೊದಲ ಲೋಕಪಾಲ್ ಆಗಲಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್ ಹಾಗೂ ಪ್ರತಿಷ್ಠಿತ ಜ್ಯುರಿಗಳಿದ್ದ ಆಯ್ಕೆ ಸಮಿತಿಯು ಪಿ.ಸಿ.ಘೋಷ್ ಅವರನ್ನು ದೇಶದ ಮೊದಲ ಲೋಕಪಾಲ್ ಆಗಿ ಆಯ್ಕೆ ಮಾಡಿದೆ.
ಘೋಷ್ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ 2017ರ ಮೇ ನಂದು ನಿವೃತ್ತರಾಗಿದ್ದಾರೆ.
ಲೋಕಪಾಲ್ ಅಧಿಕಾರಾವಧಿ 4 ವರ್ಷ ಇರಲಿದೆ.
ಕೇಂದ್ರ ವಿಚಕ್ಷಣಾ ಆಯೋಗದ ಸಾಲಿನಲ್ಲಿ ಈ ಲೋಕಪಾಲ್ ಕೆಲಸ ಮಾಡಲಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಸೇರಿದಂತೆ ಇತರ ತನಿಖಾ ಸಂಸ್ಥೆಯನ್ನು ತನಿಖೆ ಮಾಡಬಹುದು.
ಹಾಲಿ ಪ್ರಧಾನಿ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ಸಾರ್ವಜನಿಕ ವಲಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಅಡಿಯಲ್ಲಿ ದೂರು ದಾಖಲಾದರೆ ಅವರ ತನಿಖೆ ನಡೆಸಬಹುದಾದ ಸಂಪೂರ್ಣ ಅಧಿಕಾರ ಲೋಕಪಾಲ್ ಅವರಿಗಿರಲಿದೆ.
ದೇಶದ ಮೊದಲ ಲೋಕಪಾಲ್ ಯಾರು..?
Date: