ಗೂಗಲ್ ಪೇ ಆ್ಯಪ್ ಅನ್ನು ಬಹುತೇಕರು ಬಳಕೆ ಮಾಡುತ್ತಿದ್ದಾರೆ. ಹಣ ವರ್ಗಾವಣೆಗೆ ಸುಲಭ ಹಾಗೂ ಸುರಕ್ಷಿತವಾದ ಈ ಆ್ಯಪ್ ಹೊಸ ಸೌಲಭ್ಯವನ್ನು ಪರಿಚಯಿಸಿದೆ.
ಈಗ ಹಣ ವರ್ಗಾವಣೆ ಮಾತ್ರವಲ್ಲ ರೈಲ್ವೆ ಟಿಕೆಟ್ ಸಹ ಬುಕ್ ಮಾಡಬಹುದು.
ಐ ಆರ್ ಸಿಟಿಸಿ ಸಹಯೋಗದೊಂದಿಗೆ ರೈಲ್ವೆ ಟಿಕೆಟ್ ಬುಕ್ ಮಾಡಲು ಗೂಗಲ್ ಪೇ ವ್ಯವಸ್ಥೆ ಕಲ್ಪಿಸಿದೆ. ಅದಕ್ಕಾಗಿ ಐಆರ್ ಸಿಟಿಸಿ ಆ್ಯಪ್ ಬಳಸಬೇಕೆಂದೇನೂನ ಇಲ್ಲ. ಗೂಗಲ್ ಪೇ ನಲ್ಲೇ ಟಿಕೆಟ್ ಬುಕ್ಕಿಂಗ್ ಆಪ್ಷನ್ ಇದ್ದುಷ ಸರಳ ಹಂತಗಳನ್ನು ಅನುಸರಿಸಿ ಟಿಕೆಟ್ ಬುಕ್ ಮಾಡಬಹುದು.
ಗೂಗಲ್ ಪೇ ನಲ್ಲಿ ಟ್ರೈನ್ ಎನ್ನುವ ಹೊಸ ಆಯ್ಕೆ ನಿಮ್ಮ ಕಣ್ಣಿಗೆ ಬೀಳಲಿದೆ. ಆಮೇಲೆ ನಿಮ್ಮೆದುರು ಆಯ್ಕೆಗಳು ಕಾಣುತ್ತವೆ. ಬುಕ್ ಟಿಕೆಟ್ ಆಯ್ಕೆ ಮಾಡಿಕೊಂಡು ನೀವು ಟಿಕೆಟ್ ಮಾಡಬಹುದು. ಲಾಗಿನ್ ಆಗಿ ಪೇಮೆಂಟ್ ಪ್ರಕ್ರಿಯೆಯನ್ನೂ ಪೂರ್ಣ ಮಾಡಿ.
ಹಣ ವರ್ಗಾವಣೆಗೆ ಸುಲಭ ದಾರಿಯಾಗಿದ್ದ ಗೂಗಲ್ ಪೇ ಈಗ ರೈಲ್ವೆ ಟಿಕೆಟ್ ಬುಕ್ಕಿಂಗ್ ಗೂ ಸುಲಭ ಸಾಧನವಾಗಿದೆ.
ಗೂಗಲ್ ಪೇ ನಲ್ಲಿ ರೈಲ್ವೆ ಟಿಕೆಟ್ ಕೂಡ ಬುಕ್ ಮಾಡಬಹುದು..!
Date: